ಚಿಕ್ಕಮಗಳೂರು: 40 ದಿನದ ಬಳಿಕ ಮದ್ಯ ಸಿಕ್ಕ ಖುಷಿಗೆ ಕುಡಿದು ರಸ್ತೆಯಲ್ಲಿಯೇ ‘ಸ್ಲೀಪಿಂಗ್ ಮೋಡ್’ ಗೆ ಜಾರಿದ ವ್ಯಕ್ತಿ…!

210

ಚಿಕ್ಕಮಗಳೂರು : ಮದ್ಯ ಪ್ರಿಯನೊಬ್ಬ ತನ್ನ 40 ದಿನ ಆಸೆಯನ್ನು ಒಂದೇ ಸಾರಿ ಈಡೇರಿಸಿಕೊಂಡು ರಸ್ತೆ ಮಧ್ಯದಲ್ಲಿ ಸ್ಲೀಪಿಂಗ್ ಮೋಡ್ ಗೆ ಜಾರಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ, ಮದ್ಯ ಸಿಗದೆ ಮದ್ಯ ಪ್ರಿಯರಯ ಕಂಗಾಲಾಗಿದ್ದರು. 40 ದಿನಗಳ ಬಳಿಕ ರಾಜ್ಯ ಸರಕಾರ ಮದ್ಯಮಾರಾಟಕ್ಕೆ ಅನುಮತಿ ನೀಡಿದ್ದು, ಅದರಂತೆ ಇಂದು ಬೆಳಿಗ್ಗಿನಿಂದ ವೈನ್ ಶಾಪ್ ಗಳ ಮುಂದೆ ಜನ ಕ್ಯೂ ನಿಂತು ಮದ್ಯ ಖರೀದಿಸುವುದು ಸಾಮಾನ್ಯವಾಗಿತ್ತು. ಹಾಗೆಯೇ ತರಿಕೇಯ ವ್ಯಕ್ತಿ ಕೂಡ ಮದ್ಯವನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗುವುದನ್ನು ಬಿಟ್ಟು ದಾರಿ ಮಧ್ಯೆಯೇ ಕುಡಿದು ಬ್ಯಾಲೆನ್ಸ್ ತಪ್ಪಿ ಕೊನೆಗೆ ರಸ್ತೆಯಲ್ಲೇ ಬಿದ್ದಿರುವ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.