ಇಂದು ಚಿರು ಹುಟ್ಟಹಬ್ಬದ ಅಂಗವಾಗಿ ಕ್ಷತ್ರಿಯಾ ಸಿನಿಮಾದ ಟೀಸರ್ ಬಿಡುಗಡೆ…

251

ಬೆಂಗಳೂರು : ಇಂದು ನಟ ದಿವಂಗತ ಚಿರಂಜೀವಿ ಸರ್ಜಾ ಅವರ 36 ವರ್ಷದ ಹುಟ್ಟುಹಬ್ಬವಾಗಿದ್ದು, ಚಿರಂಜೀವಿ ಸರ್ಜಾ ಅವರು ಅಭಿನಯದ ಕೊನೆಯ ಚಿತ್ರ ಕ್ಷತ್ರಿಯಾ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಅನಿಲ್ ಮಂಡ್ಯ ಅವರು ನಿರ್ದೇಶಿಸಿರುವ ಕ್ಷತ್ರಿಯಾ ಸಿನಿಮಾ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರವಾಗಿದ್ದು, ಇಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಟೀಸರ್‍ನಲ್ಲಿ ಚಿರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಹಾಗೂ ಮಗುವನ್ನು ಎತ್ತಿ ಮುದ್ದಾಡುವ ದೃಶ್ಯಗಳು ಎಲ್ಲರ ಮನಕಲಕುವಂತಿದೆ.
ಈ ಬಾರಿ ಚಿರು ಇಲ್ಲದೇ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದ್ದು, ಪತ್ನಿ ಮೇಘನಾ ರಾಜ್ ಅವರು ಚಿರು ಅವರ ಸಮಾಧಿ ಬಳಿ ತೆರಳಿ ಪೂಜೆಯನ್ನು ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಚಿರು ಅವರ ಫೋಟೋವನ್ನು ಹಾಕಿಕೊಂಡು ಶುಭ ಕೋರಿದ್ದಾರೆ. ನಟ ಧ್ರುವ ಸರ್ಜಾ ಅವರೂ ಕೂಡಾ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಬಾಲ್ಯದಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಹಾಕಿಕೊಂಡು ಶುಭಕೋರಿದ್ದಾರೆ.