ನವದೆಹಲಿ : ಗಾಲ್ವಾನ್ ಕಣಿವೆಯಲ್ಲಿ ಚೀನಾ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್ ಳನ್ನು ನಿಷೇಧಿಸಿದ ಬೆನ್ನಲ್ಲೇ, ಈಗಾ ಮತ್ತೇ 47 ಚೀನಾ ಆ್ಯಪ್ ಗಳನ್ನು ನಿಷೇಧಿಸುವ ಮೂಲಕ ಎರಡನೇ ಬಾರಿಗೆ ಚೀನಾ ಆ್ಯಪ್‍ಗಳ ಮೇಲೆ ಕೇಂದ್ರ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಶೀಘ್ರದಲ್ಲೇ ಹೊಸದಾಗಿ ಬ್ಯಾನ್ ಮಾಡಿರುವ ಆ್ಯಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಈ ಹಿಂದೆ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್ ಗಳನ್ನು ಭಾರತದಲ್ಲಿ ನಿಷೇಧಿಸಿತ್ತು. ಅಲ್ಲದೇ ಇನ್ನೂ 250 ಚೀನಾ ಆ್ಯಪ್ ಗಳ ಮೇಲೆ ಭಾರತ ಸರ್ಕಾರ ಹದ್ದಿನ ಕಣ್ಣಿಟ್ಟಿದ್ದು, ಈ ಆ್ಯಪ್ ಗಳು ಭಾರತೀಯ ಪ್ರಜೆಗಳ ಖಾಸಗಿತನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಚೀನಾದ ಆ್ಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದ್ದು, ಈ ಮೂಲಕ ಒಟ್ಟು 106 ಚೀನಾ ಆ್ಯಪ್ ಗಳನ್ನು ಭಾರತ ನಿಷೇದಿಸಿದಂತಾಗಿದೆ.










