ಚುನಾವಣೆ ಬಂಡಾಯ: 24 ಕಾಂಗ್ರೆಸ್ ಅಭ್ಯರ್ಥಿಗಳ ಉಚ್ಛಾಟನೆ…

97
firstsuddi

ಬೆಂಗಳೂರು: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವ 24 ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಬಂಡಾಯವೆದ್ದ 24 ಅಭ್ಯರ್ಥಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ 6 ವರ್ಷ ಅಮಾನತು ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.

ಉಚ್ಛಾಟನೆಗೊಂಡ ಬಂಡಾಯ ಅಭ್ಯರ್ಥಿಗಳ ಪಟ್ಟಿ:

1. ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ- ಮಾಜಿ ಶಾಸಕ
2. ಕುಣಿಗಲ್ – ಬಿ.ಬಿ. ರಾಮಸ್ವಾಮಿಗೌಡ- ಮಾಜಿ ಶಾಸಕ
3. ಜಗಳೂರು- ಹೆಚ್.ಪಿ. ರಾಜೇಶ್- ಮಾಜಿ ಶಾಸಕ
4. ಹರಪನಹಳ್ಳಿ- ಎಂ.ಪಿ. ಲತಾ ಮಲ್ಲಿಕಾರ್ಜುನ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
5. ಅರಕಲಗೂಡು- ಕೃಷ್ಣೇಗೌಡ
6. ಬೀದರ್ ದಕ್ಷಿಣ – ಚಂದ್ರಾ ಸಿಂಗ್- ಕೆಪಿಸಿಸಿ ಸಂಯೋಜಕ
7. ತರೀಕೆರೆ- ಗೋಪಿಕೃಷ್ಣ- ಡಿಸಿಸಿ ಉಪಾಧ್ಯಕ್ಷ
8. ಖಾನಾಪುರ- ಇರ್ಫಾನ್ ತಾಳಿಕೋಟೆ- ಬೆಳಗಾವಿ ಮಾಜಿ ಯುವ ಕಾಂಗ್ರೆಸ್ ಮುಖಂಡ
9. ತೇರದಾಳ- ಡಾ. ಪದ್ಮಜೀತ್ ನಾಡಗೌಡ- ಕಿಸಾಬ್ ಸೆಲ್ ಉಪಾಧ್ಯಕ್ಷ
10. ಹು-ಧಾರವಾಡ ಪಶ್ಚಿಮ- ಬಸವರಾಜ್ ಮಲ್ಕಾರಿ- ಮಾಜಿ ಬ್ಲಾಕ್ ಅಧ್ಯಕ್ಷ
11. ನೆಲಮಂಗಲ- ಉಮಾದೇವಿ- ಲೇಬರ್ ಸೆಲ್ ಉಪಾಧ್ಯಕ್ಷೆ
12. ಬೀದರ್ ದಕ್ಷಿಣ- ಯೂಸುಫ್ ಅಲೀ ಜಮ್ದಾರ್- ಡಿಸಿಸಿ ಉಪಾಧ್ಯಕ್ಷ ಬೀದರ್
13. ಬೀದರ್ ದಕ್ಷಿಣ – ನಾರಾಯಣ್ ಬಂಗಿ- ಎಸ್.ಟಿ ಸೆಲ್ ಅಧ್ಯಕ್ಷ ಬೀದರ್
14. ಬೀದರ್ ದಕ್ಷಿಣ- ವಿಜಯಕುಮಾರ್ ಬರೂರು- ಮಾಜಿ ಅಧ್ಯಕ್ಷರು ತಾ.ಫಂ
15. ಮಾಯಕೊಂಡ- ಸವಿತಾ ಮಲ್ಲೇಶ್‍ನಾಯಕ್- ಟಿಕೆಟ್ ಆಕಾಂಕ್ಷಿ
16. ಶ್ರೀರಂಗಪಟ್ಟಣ- ಪಿ.ಎಚ್. ಚಂದ್ರಶೇಖರ್- ಟಿಕೆಟ್ ಆಕಾಂಕ್ಷಿ
17. ಶಿಡ್ಲಘಟ್ಟ- ಪುಟ್ಟು ಆಂಜನಪ್ಪ- ಟಿಕೆಟ್ ಆಕಾಂಕ್ಷಿ
18. ರಾಯಭಾಗ್- ಶಂಭು ಕೋಲ್ಕರ್- ಟಿಕೆಟ್ ಆಕಾಂಕ್ಷಿ
19. ಶಿವಮೊಗ್ಗ ಗ್ರಾಮಾಂತರ- ಬಿ.ಎಚ್. ಭೀಮಪ್ಪ- ಟಿಕೆಟ್ ಆಕಾಂಕ್ಷಿ
20. ಶಿಕಾರಿಪುರ- ಎಸ್.ಪಿ. ನಾಗರಾಜಗೌಡ- ಟಿಕೆಟ್ ಆಕಾಂಕ್ಷಿ
21. ತರೀಕೆರೆ- ದೋರ್ನಲ್ ಪರಮೇಶ್ವರಪ್ಪ- ಟಿಕೆಟ್ ಆಕಾಂಕ್ಷಿ
22. ಬೀದರ್- ಶಶಿ ಚೌದಿ- ಟಿಕೆಟ್ ಆಕಾಂಕ್ಷಿ
23. ಔರಾದ್- ಲಕ್ಷ್ಮಣ್ ಸೊರಳಿ- ಟಿಕೆಟ್ ಆಕಾಂಕ್ಷಿ
24. ರಾಯಚೂರು ನಗರ- ಮಜೀಬುದ್ದೀನ್- ಟಿಕೆಟ್ ಆಕಾಂಕ್ಷಿ.