ಛತ್ರಪತಿ ಶಿವಾಜಿ ಮಹಾರಾಜ್ ರಿಷಬ್ ಶೆಟ್ಟಿ ಹೊಸ ಸಿನಿಮಾದ ರಿಲೀಸ್ ಡೇಟ್ ರಿವೀಲ್.

47

ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಅವರ ‘ಕಾಂತಾರ ಚಾಪ್ಟರ್ 1’ ಸಿನಿಮಾ ಕೆಲಸಗಳು ಬಿರುಸಿನಿಂದ ಸಾಗಿದೆ. ಸಿನಿಮಾ ನೋಡುವ ಪ್ರೇಕ್ಷಕರ ಕಾತರ ಹೆಚ್ಚಾಗಿದೆ. ಈ ಸಿನಿಮಾ ಬಿಡುಗಡೆಗೆಗೂ ಮುನ್ನ ಬಹುಬೇಡಿಕೆ ನಟನ ಹೊಸ ಎರಡು ಸಿನಿಮಾಗಳು ಘೋಷಣೆಯಾಗಿವೆ. ಇತ್ತೀಚೆಗಷ್ಟೇ ‘ಜೈ ಹನುಮಾನ್’ ಸಿನಿಮಾ ಅನೌನ್ಸ್ ಆಗಿತ್ತು. ಇದೀಗ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರ ಘೋಷಣೆಯಾಗಿದೆ. ಇದು ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿರುವ ತೆಲುಗು ಚಿತ್ರರಂಗದ ‘ಜೈ ಹನುಮಾನ್’ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಡಿವೈನ್ ಸ್ಟಾರ್ ‘ಛತ್ರಪತಿ ಶಿವಾಜಿ ಮಹಾರಾಜ್’ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಿನಿಮಾವೀಗ ಅಧಿಕೃತವಾಗಿ ಘೋಷಣೆಯಾಗಿದೆ. ಸಂದೀಪ್ ಸಿಂಗ್ ನಿರ್ದೇಶನದ ಹಿಸ್ಟಾರಿಕಲ್ ಡ್ರಾಮಾದಲ್ಲಿ ಡಿವೈನ್ ಸ್ಟಾರ್ ಮುಖ್ಯಭೂಮಿಕೆಯಲ್ಲಿದ್ದು, ಗಮನಾರ್ಹ ಪೋಸ್ಟರ್ ಕೂಡಾ ಅನಾವರಣಗೊಂಡಿದೆ. ಶಿವಾಜಿ ಮಹಾರಾಜರ ನೋಟದಲ್ಲಿ ಖಡ್ಗ ಹಿಡಿದು ಕಾಂತಾರ ನಟ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದೆ. ಪೋಸ್ಟರ್ ಅಷ್ಟೇ ಅಲ್ಲ, ಸಿನಿಮಾದ ಬಿಡುಗಡೆ ದಿನಾಂಕವೂ ಇಂದೇ ರಿವೀಲ್ ಆಗಿದೆ. ‘ಛತ್ರಪತಿ ಶಿವಾಜಿ ಮಹಾರಾಜ್’ 2027ರ ಜನವರಿ 21 ರಂದು ಬಿಡುಗಡೆ ಆಗುವುದಾಗಿ ರಿಷಬ್ ಶೆಟ್ಟಿ ತಿಳಿಸಿದ್ದಾರೆ.