ಜಗತ್ತಿನ ಜನಪ್ರಿಯ ನಾಯಕರ ಪಟ್ಟಿ ಬಿಡುಗಡೆ – ಮೊದಲ ಸ್ಥಾನದಲ್ಲಿ ಮೋದಿ.

120
firstuddi

ನವದೆಹಲಿ : ಜಗತ್ತಿನ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯನ್ನು ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಬಿಡುಗಡೆ ಮಾಡಿದ್ದು, ಶೇ.71 ರೇಟಿಂಗ್ ಪಡೆದಿರುವ ಪ್ರಧಾನಿ ಮೋದಿ ಅವರು ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಜಾಗತಿಕ ಪಟ್ಟಿಯಲ್ಲಿ ವಿಶ್ವದ 13 ನಾಯಕರು ಸ್ಥಾನ ಪಡೆದಿದ್ದಾರೆ. ನರೇಂದ್ರ ಮೋದಿ – ಶೇ 71, ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ – ಶೇ 66, ಮಾರಿಯೋ ಡ್ರಾಘಿ – ಶೇ 60, ಫ್ಯೂಮಿಯೊ ಕಿಶಿಡಾ – ಶೇ 48, ಓಲಾಫ್ ಸ್ಕೋಲ್ಜ್ – ಶೇ 44, ಜೋ ಬೈಡೆನ್ – ಶೇ 43, ಜಸ್ಟಿನ್ ಟ್ರುಡೊ- ಶೇ 43, ಸ್ಕಾಟ್ ಮಾರಿಸನ್ – ಶೇ 41, ಪೆಡ್ರೊ ಸ್ಯಾಂಚೆಜ್ – ಶೇ 40, ಮೂನ್ ಜೇ-ಇನ್ – ಶೇ 38, ಜೈರ್ ಬೋಲ್ಸನಾರೊ – ಶೇ 37, ಎಮ್ಯಾನುಯೆಲ್ ಮ್ಯಾಕ್ರನ್ – ಶೇ 34, ಬೋರಿಸ್ ಜಾನ್ಸನ್ – ಶೇ 26 ರೇಟಿಂಗ್ ಪಡೆದುಕೊಂಡಿದ್ದಾರೆ.

2021ರಲ್ಲೂ ಬಿಡುಗಡೆಯಾದ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರು ಮೊದಲ ಸ್ಥಾನದಲ್ಲಿದ್ದರು.