ಜನತೆಗೆ ಬೆಲೆ ಏರಿಕೆ ಶಾಕ್ : ಎಲ್‌ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ…

46
firstsuddi

ನವದೆಹಲಿ : ದೇಶದಲ್ಲಿ ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ ಆಗಿದೆ. ಗೃಹ ಬಳಕೆಯ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 3.5 ರೂಪಾಯಿ ಹೆಚ್ಚಿಸಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಈ ಮೂಲಕ ಇಂದಿನಿಂದ ಗೃಹಬಳಕೆಯ ಸಿಲಿಂಡರ್ ಬೆಲೆ 1003 ರೂಪಾಯಿ ಆಗಿದೆ. ಈ ಮೊದಲು 999.50 ರೂಪಾಯಿಗಳಿದ್ದವು.

ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದ ನಂತರ ಇಂದಿನಿಂದ ದೆಹಲಿ ಮತ್ತು ಮುಂಬೈನಲ್ಲಿ 14.2 ಕೆಜಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 1003 ರೂ., ಕೋಲ್ಕತ್ತಾದಲ್ಲಿ 1029 ರೂ., ಚೆನ್ನೈನಲ್ಲಿ 1018.5 ರೂ.ಗೆ ಏರಿಕೆಯಾಗಿದೆ.

ಇನ್ನು ಇದರೊಂದಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಗಳ ಬೆಲೆಯನ್ನು 8 ರೂಪಾಯಿ ಹೆಚ್ಚಿಸಲಾಗಿದೆ. ಹೊಸ ದರದನ್ವಯ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2354 ರೂ., ಕೋಲ್ಕತ್ತಾದಲ್ಲಿ 2454 ರೂ., ಮುಂಬೈನಲ್ಲಿ 2306 ರೂ. ಮತ್ತು ಚೆನ್ನೈನಲ್ಲಿ 2507 ರೂ. ಆಗಿರಲಿದೆ.