ಜಮ್ಮು ಕಾಶ್ಮೀರದ ರಾಷ್ಟ್ರಪತಿಯವರ ಆಡಳಿತ ಅವಧಿಯನ್ನು ವಿಸ್ತರಿಸುಂತೆ ಮನವಿ ಮಾಡಿದ ಗೃಹ ಸಚಿವ ಅಮಿತ್ ಶಾ…

273
firstsuddi

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ತಮ್ಮ ಮೊದಲ ಮಸೂದೆಯನ್ನು ಮಂಡಿಸಿದ್ದು, ಜಮ್ಮ ಮತ್ತು ಕಾಶ್ಮೀರದ ರಾಷ್ಟ್ರಪತಿಗಳ ಆಡಳಿತದ ಅವಧಿಯನ್ನು 6 ತಿಂಗಳು ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ರಂಜಾನ್ ಹಾಗೂ ಅಮರನಾಥ ಯಾತ್ರೆಯ ದೃಷ್ಟಿಯಿಂದ ವಿಧಾನಸಭೆಯ ಚುನಾವಣೆಯನ್ನು ವರ್ಷದ ಅಂತ್ಯದಲ್ಲಿ ನಡೆಸಲು ಆಯೋಗ ಸಿದ್ಧತೆ ನಡೆಸುತ್ತಿದ್ದು, ಹೀಗಾಗಿ ರಾಷ್ಟ್ರಪತಿಯವರ ಆಡಳಿತ ಅವಧಿಯನ್ನು ಇನ್ನೂ 6 ತಿಂಗಳು ವಿಸ್ತರಿಸುವಂತೆ ಮನವಿ ಮಾಡಿದ್ದು, ಈ ನಿರ್ಣಯಕ್ಕೆ ಪಕ್ಷತೀತರಾಗಿ ಎಲ್ಲರೂ ಬೆಂಬಲ ನೀಡಬೇಕೆಂದು ಎಂದು ಕೋರಿದ್ದಾರೆ