ಜಿಬಿಎಸ್ ಸಿಂಡ್ರೋಮ್ ಕಾಯಿಲೆಗೆ ಮೊದಲ ಬಲಿ: ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು.

35

ನಾಗ್ಪುರ: ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಗಿಲೆನ್ ಬರೆ ಸಿಂಡ್ರೋಮ್ ಕಾಯಿಲೆಗೆ ನಾಗ್ಪುರದ 45 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ನಾಗ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಜಿಬಿಎಸ್ ರೋಗಿಗಳಲ್ಲಿ ಒಬ್ಬ ನಿನ್ನೆ ಸಾವನ್ನಪ್ಪಿದ್ದಾನೆ. ಈ ಮೂಲಕ ನಾಗ್ಪರದಲ್ಲಿ ಜಿಬಿಎಸ್‍ಗೆ ಮೊದಲ ಬಲಿಯಾಗಿದೆ. ಪಾರ್ಡಿ ಪ್ರದೇಶದ ವ್ಯಕ್ತಿಯೊಬ್ಬ ಈ ಸಿಂಡ್ರೋಮ್ ನಿಂದ ಬಲಿಯಾಗಿದ್ದಾನೆ. ಈತನನ್ನು ಆರಂಭದಲ್ಲಿ ಪಾರ್ಶ್ವವಾಯು ಪೀಡಿತ ರೋಗಿ ಎಂದು ಗುರುತಿಸಲಾಗಿತ್ತು. ರೋಗಿಯ ಲಕ್ಷಣಗಳನ್ನು ಗಮನಿಸಿದ ಬಳಿಕ ಅವರಿಗೆ ವೆಂಟಿಲೇಟರ್ ಚಿಕಿತ್ಸೆ ನೀಡಬೇಕಾದ ಅಗತ್ಯವನ್ನು ಅರಿತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಅಧಿಕ ರಕ್ತದೊತ್ತ ಹೊಂದಿದ್ದ ಇವರಿಗೆ ಪರೀಕ್ಷೆ ನಡೆಸಿದಾಗ ಜಿಬಿಎಸ್ ದೃಢಪಟ್ಟಿತು. ಫೆಬ್ರವರಿ 11ರಂದು ದಾಖಲಾಗಿದ್ದ ವ್ಯಕ್ತಿ ಸ್ಥಿತಿ ಗಂಭೀರವಾಗಿತ್ತು. ಶುಕ್ರವಾರ ಅವರ ಪರಿಸ್ಥಿತಿ ಗಂಭೀರಗೊಂಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.