ಜಿ.ಪಂ ನೌಕರನಿಗೆ ಹಾಸನ ಉಪ ವಿಭಾಗಾಧಿಕಾರಿಯಿಂದ ಕಪಾಳ ಮೋಕ್ಷ…

47
firstsuddi

ಹಾಸನ : ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಅವರಿಗೆ ಹಾಸನದ ಉಪ ವಿಭಾಗಾಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ. ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರ್ಷಕ್ಕೊಮ್ಮೆ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲಕ್ಕೆ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಅವರು ಕುಟುಂಬ ಸಮೇತರಾಗಿ ದೇವಿ ದರ್ಶನಕ್ಕೆ ಬಂದಿದ್ದಾರೆ. ನೂರಾರು ಜನರು ಒಳ ಬರುತ್ತಿದ್ದಾಗ ಅವರ ಜೊತೆಯಲ್ಲಿಯೇ ಜಿಲ್ಲಾ ಪಂಚಾಯಿತಿ ನೌಕರ ಶಿವೇಗೌಡರು ಬಂದಿದ್ದರು. ಆ ವೇಳೆ ಎಸಿ ಜಗದೀಶ್ ಆತನನ್ನು ತಡೆದು, ಯಾಕೋ ಓಡಿ ಬರುತ್ತಿದ್ದಿಯಾ, ನಿನಗೆ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದಿಸಿದ್ದಾರೆ.

ತಾನು ಜಿ.ಪಂ ನೌಕರ ಎಂದು ಶಿವೇಗೌಡ ಗುರುತಿನ ಚೀಟಿ ತೋರಿಸಿದ್ದಾರೆ. ಆದರೆ ಎಸಿ ಜಗದೀಶ್ ಕೊರಳಲ್ಲಿ ಧರಿಸಿದ್ದ ಕಾರ್ಡ್ ಕಿತ್ತು ಎಸೆದಿದ್ದು, ಶಿವೇಗೌಡ ಕುಟುಂಬದವರ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಎಸಿ ಜಗದೀಶ್ ಅವರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.