ಬೆಂಗಳೂರು : ಜೀವನ್ ಭೀಮಾನಗರದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಬೆಳಗಿನ ಜಾವ 3.20ಕ್ಕೆ ಹೆಚ್ಎಸ್ಆರ್ ಲೇಔಟ್ನಿಂದ ಮುರುಗೇಶ್ ಪಾಳ್ಯಕ್ಕೆ ತೆರಳಲು ಯುವತಿ ಉಬರ್ ಕ್ಯಾಬ್ ಬುಕ್ ಮಾಡಿದ್ಲು. ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ದೇವರಾಜ್ ಹಸೆರಿನ ಕ್ಯಾಬ್ ಡ್ರೈವರ್ ಪಿಕಪ್ ಪಾಯಿಂಟ್ಗೆ ಬಂದು ಯುವತಿಯನ್ನ ಕರೆದೊಯ್ದಿದ್ದಾನೆ.
ಆರೋಪಿ ಕ್ಯಾಬ್ ಚಾಲಕ ದೇವರಾಜು ಯುವತಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ. ಬಳಿಕ ಆಕೆಯ ಮನೆ ಮುರುಗೇಶ್ ಪಾಳ್ಯ ಸಮಿಪವೇ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಎಚ್ಚರಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದರಿಂದ ಕಂಗಾಲಾದ ಆರೋಪಿ ಕಾರಿನಿಂದ ಹೊರಬಂದಿದ್ದು, ಯುವತಿ ಜೊತೆ ಸಾರಿ ಕೇಳಿದ್ದಾನೆ.
ಅತ್ಯಾಚಾರ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ ಕ್ಯಾಬ್ ಡ್ರೈವರ್, ಐದು ನಿಮಿಷಗಳ ಬಳಿಕ ಮೊಬೈಲ್ ಹುಡುಕಿಕೊಂಡು ಮತ್ತೆ ಘಟನಾ ಸ್ಥಳಕ್ಕೆ ಬಂದು ಎಲ್ಲಾ ಕಡೆ ಹುಡುಕಾಡಿದ್ದಾನೆ. ಆದರೆ ಆತನಿಗೆ ಎಲ್ಲೂ ಮೊಬೈಲ್ ಸಿಕ್ಕಿರಲಿಲ್ಲ. ಹೀಗಾಗಿ ಅಲ್ಲಿಂದ ವಾಪಸ್ ಆಗಿದ್ದಾನೆ. ಆದ್ರೆ ಯುವತಿ ಗಾಬರಿಯಲ್ಲಿ ಹಿಂದಿನ ಸೀಟಿನಲ್ಲಿದ್ದ ಈತನ ಮೊಬೈಲನ್ನ ಸಹ ತೆಗೆದುಕೊಂಡು ಹೋಗಿದ್ಲು. ಆರೋಪಿ ದೇವರಾಜ್ ಮೊಬೈಲ್, ಸಂತ್ರಸ್ತೆ ಜೊತೆ ಇದ್ದ ಕಾರಣ ಊಬರ್ ಟ್ರಿಪ್ ಸಹ ಎಂಡ್ ಅಗಿರಲಿಲ್ಲ.
ಗಾಬರಿಯಿಂದ ಬಟ್ಟೆ ಸರಿ ಮಾಡ್ಕೊಂಡು ಕಾರಿನಿಂದ ಇಳಿದು ತನ್ನ ಮನೆಯತ್ತ ದೌಡಾಯಿಸಿದ್ದಾಳೆ. ಮನೆಗೆ ಬಂದ ಬಳಿಕ ಯುವತಿ ಬೆಳಗ್ಗಿನ ಜಾವ 112 ಗೆ ಕರೆಮಾಡಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರು ಯುವತಿ ಮನೆಗೆ ಹೋಗಿ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿ ಕರೆಸಿ ಠಾಣೆಗೆ ಯುವತಿ ಕರೆದುಕೊಂಡು ಹೋಗಿದ್ದಾರೆ. 7 ಗಂಟೆಗೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ಅರೋಪಿ ಮೊಬೈಲ್ ಮತ್ತು ಕಾರ್ ನಂಬರ್ ಊಬರ್ ರಿಜಿಸ್ಟರ್ ಅನ್ವಯ ಹುಡುಕಿದ್ದಾರೆ. ಘಟನೆ ಬಳಿಕ ಅವಲಹಳ್ಳಿಯ ತನ್ನ ರೂಮ್ ನಲ್ಲಿದ್ದ ಅರೋಪಿಯನ್ನು 11 ಗಂಟೆ ಸುಮಾರಿಗೆ ಪೊಲೀಸರು ವಶಕ್ಕೆ ಪಡೆದರು. ನಂತರ ವಿಚಾರಣೆ ಬಳಿಕ ಮಧ್ಯಾಹ್ನ 2 ಗಂಟೆಗೆ ಆರೋಪಿಯನ್ನು ಬಂಧಿಸಲಾಗಿದೆ.
ದೂರಿನ ಬಳಿಕ ಯುವತಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಆಕೆ ಧರಿಸಿದ್ದ ಬಟ್ಟೆಯನ್ನ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇನ್ನು ಆರೋಪಿ ಬಟ್ಟೆಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಸದ್ಯ ತಪಾಸಣೆ ಮಾಡಿರುವ ವೈದ್ಯರು ಅತ್ಯಾಚಾರವಾಗಿರೋ ಬಗ್ಗೆ ಮೌಖಿಕವಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇಂದು ಮೆಡಿಕಲ್ ರಿಪೋರ್ಟ್ ಬರಲಿದ್ದು ಸತ್ಯ ಬಯಲಾಗಿದೆ.
ಬಂಧಿತ ಆರೋಪಿ ದೇವರಾಜ್ ಆಂಧ್ರಪ್ರದೇಶ ಮೂಲದವನಾಗಿದ್ದು, ಎರಡು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಕ್ಯಾಬ್ ಚಲಾಯಿಸ್ತಿದ್ದನಂತೆ. ಸದ್ಯ ಕ್ಯಾಬ್ ಡ್ರೈವರ್ ದೇವರಾಜ್ ವಿರುದ್ಧ ರೇಪ್ ಕೇಸ್ ದಾಖಲಿಸಿರೋ ಪೊಲೀಸರು ಇಂದು ಕೋರ್ಟ್ಗೆ ಹಾಜರುಪಡಿಸಿಲಿದ್ದಾರೆ.










