ಟೀ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ಬಾಲಕಿಯನ್ನ ಕೊಂದ್ರು!

102
firstsuddi

ಲಕ್ನೋ : ಟಿ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದಳೆಂದು ಬಾಲಕಿಯೋರ್ವಳ ಕೊಲೆಗೈದಿರುವ ಅಚ್ಚರಿ ಘಟನೆಯೊಂದು ಉತ್ತರ ಪ್ರದೇಶದ ದೇವಾರಿಯಾದಲ್ಲಿ ನಡೆದಿದೆ. ಮೃತಳನ್ನು ನೇಹಾ (16) ಎಂದು ಗುರುತಿಸಲಾಗಿದೆ.

ನೇಹಾ ಪಂಜಾಬ್ ನ ಲೂಧಿಯಾನದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಕೆಲ ದಿನಗಳ ಹಿಂದೆ ಊರಿಗೆ ಆಗಮಿಸಿದ್ದ ನೇಹಾ ಮನೆಯಲ್ಲಿ ಜೀನ್ಸ್ ಪ್ಯಾಂಟ್ ಹಾಗೂ ಟಿ-ಶರ್ಟ್ಸ್ ಹಾಕಿಕೊಳ್ಳುತ್ತಿದ್ದಳು. ಈ ವೇಳೆ ಮನೆಯಲ್ಲಿ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡ ಎಂದು ನೇಹಾ ಚಿಕ್ಕಪ್ಪ ಹಾಗೂ ಅಜ್ಜ ವಾರ್ನ್ ಮಾಡಿದ್ದಾರೆ. ಇದೇ ವಿಚಾರಕ್ಕಾಗಿ ಎರಡ್ಮೂರು ಸಲ ಜಗಳ ಸಹ ನಡೆದಿತ್ತು. ಆದರೆ ಬಾಲಕಿ ತನ್ನಿಷ್ಟದ ಬಟ್ಟೆ ಹಾಕಿಕೊಳ್ಳುವುದನ್ನು ಮುಂದುವರೆಸಿದ್ದಳು. ಕಳೆದ ಮಂಗಳವಾರ ಊರ ಹೊರಗೆ ಸೇತುವೆಯ ಬಳಿ ನೇಣು ಬಿಗಿದುಕೊಂಡ ರೀತಿಯಲ್ಲಿ ನೇಹಾ ಶವವಾಗಿ ಪತ್ತೆಯಾಗಿದ್ದಾಳೆ.

ಇತ್ತ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮಗಳನ್ನು ಚಿಕ್ಕಪ್ಪ ಹಾಗೂ ಆಕೆಯ ಅಜ್ಜ ಸೇರಿ ಕೊಲೆ ಮಾಡಿ ಬಳಿಕ ಮಗಳ ಶವವನ್ನು ಇಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ತಾಯಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಚಿಕ್ಕಪ್ಪ ಹಾಗೂ ಅಜ್ಜನನ್ನು ಬಂಧಿಸಿದ್ದಾರೆ.