ಡಿಪಿ ಬದಲಿಸಿದ ಆರ್‌ಎಸ್‌ಎಸ್‌ – ಭಗವಾಧ್ವಜ ಜಾಗದಲ್ಲಿ ತ್ರಿವರ್ಣ ಧ್ವಜ.

57
firstsuddi

ನವದೆಹಲಿ : ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಆರ್‌ಎಸ್‌ಎಸ್‌ ತನ್ನ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಫೋಟೋಗೆ ರಾಷ್ಟ್ರಧ್ವಜವನ್ನು ಹಾಕಿಕೊಂಡಿದೆ.

ಆಗಸ್ಟ್ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ತ್ರಿವರ್ಣ ಧ್ವಜದ ಚಿತ್ರ ಅಳವಡಿಸಲು ಮನವಿ ಮಾಡಿದ್ದರು. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಡಿಪಿ ಬದಲಿಸಿರಲಿಲ್ಲ. ಇದು ಭಾರೀ ಟೀಕೆಗೆ ಗುರಿಯಾಗಿತ್ತು.

ಇದೀಗ ಸ್ವಾತಂತ್ರ್ಯ ದಿನಕ್ಕೆ 2 ದಿನಗಳ ಮುಂಚೆ ಸಂಘದ ಟ್ವಿಟರ್ ಖಾತೆಯ ಡಿಪಿಯಲ್ಲಿ ತ್ರಿವರ್ಣ ಧ್ವಜದ ಚಿತ್ರವನ್ನು ಅಳವಡಿಸಿದೆ. ಅಲ್ಲದೇ, ಸಂಘದ ಸರ ಸಂಘಚಾಲಕರಾದ ಮೋಹನ್ ಭಾಗವತ್ ಅವರು ತಮ್ಮ ಡಿಪಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಿದ್ದಾರೆ.