ಬೆಂಗಳೂರು : ಡೇಟಿಂಗ್ ಆ್ಯಪ್ ನಲ್ಲಿರುವ ಯುವತಿಯರ ಫೋಟೋಗಳನ್ನು ಬಳಸಿ ಗ್ರಾಹಕರನ್ನು ವೇಶ್ಯಾವಾಟಿಕೆಗೆ ಸೆಳೆದು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ನಿನ್ನೆ ಬಂಧಿಸಿದ್ದರು. ಬಂಧಿತರಲ್ಲಿ ಓರ್ವ ಸ್ಯಾಂಡಲ್ ವುಡ್ ನಟನೂ ಇರುವುದು ತನಿಖೆಯಲ್ಲಿ ಗೊತ್ತಾಗಿದೆ.
ನ್ಯೂರಾನ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಮಂಜುನಾಥ್ ಅಲಿಯಾಸ್ ಸಂಜು ಆನಂತರ ಚಿತ್ರೋದ್ಯಮದಿಂದ ದೂರವಾಗಿ ಹೆಣ್ಣುಮಕ್ಕಳನ್ನು ದಂಧೆಗೆ ಇಳಿಸುವ ಕೆಲಸದಲ್ಲಿ ನಿರತನಾಗಿದ್ದ ಎಂದು ತಿಳಿದು ಬಂದಿದೆ.
ಡೇಟಿಂಗ್ ಆ್ಯಪ್ ನಲ್ಲಿ ಮಹಿಳೆ ಹಾಗೂ ಯುವತಿಯರ ನಕಲಿ ಫೋಟೋ ಸೃಷ್ಟಿಸಿ ಗ್ರಾಹಕರನ್ನು ವೇಶ್ಯಾವಾಟಿಕೆ ದಂಧೆಗೆ ಸೆಳೆದು ಅಕ್ರಮವಾಗಿ ಹಣ ಗಳಿಸುತ್ತಿದ್ದ ಆರೋಪದ ಮೇಲೆ ಆರು ಜನರನ್ನು ಸುದ್ದುಗುಂಟೆಪಾಳ್ಯ ಪೊಲೀಸರು ನಿನ್ನೆ ಬಂಧಿಸಿದ್ದರು. ನೊಂದ ಗ್ರಾಹಕರು ನೀಡಿದ ದೂರಿನ ಆಧರಿಸಿ ಈ ಜಾಲದಲ್ಲಿ ತೊಡಗಿದ್ದರೆನ್ನಲಾದ ಮಂಜುನಾಥ್, ಮಲ್ಲಿಕಾರ್ಜುನ, ಮುಂಜುನಾಥ್, ಮೋಹನ್, ಹನುಮೇಶ್ ಮತ್ತು ರಾಜೇಶ್ ಎಂಬುವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.