ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು…

135
firstsuddi

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ, ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಚಿತ್ರರಂಗದ ದೊಡ್ಡ ನಟ ಪ್ರಭುದೇವ ಶಿಷ್ಯನಾಗಿರುವ ಕಿಶೋರ್ ಶೆಟ್ಟಿ ಬಾಲಿವುಡ್ ಚಿತ್ರ ‘ಎಬಿಸಿಡಿ’ ಯಲ್ಲಿ ನಟಿಸಿದ್ದರು. ಅಲ್ಲದೆ ಜೀ ಟಿವಿಯ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಟೆಲಿವಿಷನ್ ರಿಯಾಲಿಟಿ ಡ್ಯಾನ್ಸ್ ಸ್ಪರ್ಧೆಯ ಸೀಸನ್ 2 ರಲ್ಲಿಯೂ ಭಾಗವಹಿಸಿದ್ದ ಅವರು ಅಗ್ರ ಎಂಟರ ಘಟ್ಟ ತಲುಪಿದ್ದರು.

ಮಾದಕವಸ್ತು ಜಾಲ ಬೇಧಿಸಲು ರಾಜ್ಯಾದ್ಯಂತ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಇಂದು ಈ ಡ್ಯಾನ್ಸರ್ ಬಂಧನವಾಗಿದೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು ಇಂದು ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ಬುಲಾವ್ ನೀಡೀದೆ.