ಮೈಸೂರು : ನಿನ್ನೆ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಹಿನಕಲ್ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸ್ ಲಾಠಿ ಸಿಲುಕಿ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಕೆರಳಿದ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು.
ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಪಾಸಣೆ ವೇಳೆ ಪೊಲೀಸರು ನಮ್ಮನ್ನ ತಡೆಯಲಿಲ್ಲ. ದೇವರಾಜ್ ಅವರೇ ಬೈಕ್ ಸ್ಲೋ ಮಾಡಿದ್ರು. ಆಗ ಹಿಂಬದಿಯಿಂದ ಬಂದ ಟಿಪ್ಪರ್ ನಮಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಎಂದು ಹಿಂಬದಿ ಸವಾರ ಸುರೇಶ್ ಅವರು ಹೇಳಿದ್ದಾರೆ.
ಬೈಕ್ ಹಿಡಿಯುತ್ತಿದ್ದುದ್ದನ್ನ ಕಂಡು ಇವರೇ ಸ್ಲೋ ಮಾಡಿದ್ರು. ಆಗ ಹಿಂದಿನಿಂದ ಟಿಪ್ಪರ್ ಬಂದು ಡಿಕ್ಕಿ ಹೊಡೀತು. ನಾನು ಕೆಳಗೆ ಬಿದ್ದಿದ್ದು, ಮಾತ್ರ ನೆನಪಿದೆ. ಆಮೇಲೆ ನೋಡಿದ್ರೆ ಜನ ಸೇರಿದ್ರು. ಘಟನೆಗೆ ಪೊಲೀಸರು ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.










