ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದೆ ಶೋಭ ಕರಂದ್ಲಾಜೆ…

161
firstsuddi

ಬೆಂಗಳೂರು : ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಶೋಭಾ ಕರಂದ್ಲಾಜೆ ಅವರು ತಮ್ಮ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಕುರಿತು ಟ್ವೀಟ್ ಮಾಡಿರುವ ಅವರು, “ಚೆರುಕುನ್ನಿನ ದಲಿತ ಕುಟುಂಬಳಿಗೆ ಆದ ತಾರತಮ್ಯದ ವಿರುದ್ಧ ಧನಿಯೆತ್ತುವ ಬದಲು ನನ್ನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಕ್ಷಪಾತದ ಎಡ ಸರ್ಕಾರದ ಈ ಒತ್ತಡದ ತಂತ್ರಗಳ ವಿರುದ್ಧ ಇಡೀ ಸಮಾಜ ಒಗ್ಗಟ್ಟಾಗಲು ಸಕಲವಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಉಭಯ ಸದನಗಳು ಒಪ್ಪಿಕೊಂಡಿವೆ. ಪೌರತ್ವ ತಿದ್ದುಪಡಿಯನ್ನು ಬೆಂಬಲಿಸುತ್ತಿರುವ ಜನರನ್ನು ವ್ಯವಹಾರದಿಂದ ಬಹಿಷ್ಕರಿಸಲಾಗುತ್ತಿದೆ. ಮೂಲ ಸೌಲಭ್ಯಗಳು ಮತ್ತು ಉದ್ಯೋಗಗಳನ್ನು ನಿರಾಕರಿಸಲಾಗಿದೆ. ಕೇರಳಾದ್ಯಂತ ನಡೆಯುತ್ತಿರುವ ಈ ಎಲ್ಲಾ ಕೃತ್ಯಗಳಿಂದ ಸಿಪಿಎಂ ಸರ್ಕಾರ ಕುರುಡಾಗಿದೆ. ಆದರೆ ಸತ್ಯವನ್ನು ಹೇಳಿದ್ದಕ್ಕೆ ಕೇರಳ ಸರ್ಕಾರ ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.