ತಲೆ ಮೇಲೆ ಕಲ್ಲು ಎತ್ತಿ ಹಾಕಿ ವೃದ್ಧೆಯ ಬರ್ಬರ ಕೊಲೆ!

91
firstsuddi

ಹಾಸನ : ತಲೆ ಮೇಲೆ ಕಲ್ಲು ಎತ್ತಿ ಹಾಕಿ ವೃದ್ಧೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಸಕಲೇಶಪುರ ತಾಲೂಕಿನ ಹಾರಳ್ಳಿ ಗ್ರಾಮದಲ್ಲಿ ನಡೆದಿದೆ.

ಮಲ್ಲಮ್ಮ (85) ಕೊಲೆಯಾದ ವೃದ್ಧೆ. ಮಲ್ಲಮ್ಮನ ಮಗ ಮೈಸೂರಿನಲ್ಲಿ ನೆಲೆಸಿದ್ದು, ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ನಿನ್ನೆ ಸಂಜೆ ಮನೆ ಬಳಿಯೇ ಮಲ್ಲಮ್ಮರನ್ನು ಕೊಂದ ಹಂತಕರು ಚಿನ್ನಾಭರಣ ಹೊತ್ತೊಯ್ದಿದಿದ್ದಾರೆ.

ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.