ತೀವ್ರ ಬಡತನ, ಅನಾರೋಗ್ಯದಿಂದ ಬೇಸತ್ತು ಸೈನೈಡ್ ಸೇವಿಸಿ ದಂಪತಿ ಆತ್ಮಹತ್ಯೆ…

528
firstsuddi

ಕೋಲಾರ : ತೀವ್ರ ಅನಾರೋಗ್ಯದಿಂದ ಬೇಸತ್ತು ದಂಪತಿ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮುಳಬಾಗಿಲು ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಬಂಗಾರಪೇಟೆ ನಿವಾಸಿಗಳಾದ ರಾಮು(55) ಹಾಗೂ ಪ್ರಮೀಳ(48) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಗುರುತಿಸಲಾಗಿದ್ದು, ಪ್ರಮೀಳ ಅವರು ಡಯಾಬಿಟೀಸ್ ಖಾಯಿಲೆಯಿಂದ ನರಳುತ್ತಿದ್ದರು ಎನ್ನಲಾಗಿದ್ದು, ಹೀಗಾಗಿ ವೈದ್ಯರು ಅವರ ಒಂದು ಕಾಲನ್ನು ತೆಗೆದಿದ್ದರು. ಅಲ್ಲದೇ ಡಯಾಲಿಸಿಸ್ ಮಾಡಿಸುವಂತೆ ಸೂಚಿಸಿದ್ದರು. ಆದರೆ ಬಡತನ ಹಾಗೂ ತೀವ್ರ ಅನಾರೋಗ್ಯದಿಂದ ಬೇಸತ್ತಿದ್ದ ದಂಪತಿ ಚಿಕಿತ್ಸೆ ಪಡೆಯಲು ಕಷ್ಟವಾಗಿದ್ದರಿಂದ ಇಂದು ಬೆಳಿಗ್ಗೆ ಮೆಡಿಕಲ್‍ಗೆ ತೆರಳಿ ಸೈನೈಡ್ ಖರೀದಿಸಿದ್ದು, ಬಳಿಕ ಇಬ್ಬರು ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಳಬಾಗಿಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.