ಚಿಕ್ಕಮಗಳೂರು : ಜಿಲ್ಲಾ ಜಾನಪದ ತೃತೀಯ ಸಮ್ಮೇಳನದ ಅಂಗವಾಗಿ ನಗರದಲ್ಲಿ ಇಂದು ವಿವಿಧ ಸಾಂಸ್ಕೃತಿಕ ಮತ್ತು ಜಾನಪದ ಕಲಾ ತಂಡಗಳ ನಡುವೆ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.
ವೀರಗಾಸೆ, ಡೊಳ್ಳುಕುಣಿತ, ಭಜನಾ ತಂಡಗಳು, ಕೋಲಾಟ, ವೀರಗಾಸೆ, ಚೋಮನ ಕುಣಿತ, ಪೂರ್ಣಕುಂಭ ಹೊತ್ತ ಮಹಿಳೆಯರು, ಗ್ರಾಮೀಣ ವಾದ್ಯಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿ ರಸ್ತೆಯುದ್ದಕ್ಕೂ ಜಾನಪದ ಲೋಕವನ್ನು ಅನಾವರಣಗೊಳಿಸಿದವು.
ಅಲಂಕೃತಗೊಂಡ ಕುದುರೆ ಸಾರೋಟು ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ ಅವರನ್ನು ಮೆರವಣಿಗೆ ಮೂಲಕ ಸಮ್ಮೇಳನದ ವೇದಿಕೆಗೆ ಕರೆತರಲಾಯಿತು.










