ನಟಿ ಜಾಕ್ವೆಲಿನ್ 7 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ…

76
firstsuddi

ನವದೆಹಲಿ : ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಿರುವ ಆರೋಪದಡಿ ಸುಕೇಶ್ ಚಂದ್ರಶೇಖರ್ ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದಾಗ ನಟಿ ಜಾಕ್ವೆಲಿನ್ ಹಾಗೂ ಸುಕೇಶ್ ಚಂದ್ರಶೇಖರ್ ನಡುವಿನ ಸಂಬಂಧ ಬಯಲಾಗಿತ್ತು. ವಿಚಾರಣೆ ವೇಳೆ ಸುಕೇಶ್ ನಟಿ ಜಾಕ್ವೆಲಿನ್ ಗೆ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದನು.

ತನಿಖಾಧಿಕಾರಿಗಳು ಆರೋಪಿ ಚಂದ್ರಶೇಖರ್ ಜೊತೆಗಿನ ಸಂಬಂಧದ ಬಗ್ಗೆ ನಟಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮೂರು ವಿನ್ಯಾಸದ ಬ್ಯಾಗ್, ಒಂದು ಜೊತೆ ಶೂ, ಎರಡು ಜೊತೆ ಡೈಮಂಡ್ ಕಿವಿಲೋಲೆ, ಬಹು ಬಣ್ಣದ ಬ್ರಾಸೆಲೆಟ್ ಮತ್ತಿತರ ಗಿಫ್ಟ್ ಗಳನ್ನು ಚಂದ್ರಶೇಖರ್ ಅವರಿಂದ ಪಡೆದಿರುವುದಾಗಿ ಜಾಕ್ವೆಲಿನ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಮಿನ್ ಕೂಪರ್ ಕಾರೊಂದನ್ನು ಮರಳಿಸಿರುವುದಾಗಿ ಜಾಕ್ವೆಲಿನ್ ಹೇಳಿದ್ದರು ಎಂದು ವರದಿಯಾಗಿದೆ.