ದಲಿತ ಯುವತಿಗೆ ಬಲವಂತವಾಗಿ ಗೋಮಾಂಸ ತಿನ್ನಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಮುಸ್ಲಿಂ ಯುವಕರು…

63
firstsuddi

ನೊಯ್ಡಾ: ದಲಿತ ಯುವತಿಗೆ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಲ್ಲದೇ ಆಕೆಯ ಮೇಲೆ ಇಬ್ಬರು ಮಸ್ಲಿಂ ಯುವಕರು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಹೋಟೆಲ್‍ವೊಂದರಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಸಂತ್ರಸ್ತೆ ಪ್ರೇಮ್ ನಗರದ ಪೊಲೀಸ್ ವೃತ್ತದ ಸಮೀಪದಲ್ಲಿ ವಾಸಿಸುತ್ತಿದ್ದಳು. ಈಕೆ ತನ್ನ ಮುಸ್ಲಿಂ ಸ್ನೇಹಿತನಿಗೆ 30 ಸಾವಿರ ರೂಪಾಯಿ ಸಾಲ ನೀಡಿದ್ದಳು. ಸೆಪ್ಟೆಂಬರ್ 1 ರಂದು ಹಣ ಹಿಂದಿರುಗಿಸುತ್ತೇನೆಂದು ಹೇಳಿ ಯುವತಿಯನ್ನು ಹೋಟೆಲ್‍ಗೆ ಕರೆಸಿಕೊಂಡಿದ್ದಾನೆ. ಯುವತಿ ಹೋಟೆಲ್‍ಗೆ ಬಂದಾಗ ರೂಮ್‍ನಲ್ಲಿ ಆಕೆಯ ಸ್ನೇಹಿತ ಶಿಫ್ತತ್ ಹಾಗೂ ಇನ್ನಿಬ್ಬರು ಗೆಳೆಯರಾದ ನದೀಮ್ ಮತ್ತು ಶೋಯೆಬ್ ಇದ್ದರು. ಇವರು ಮೂವರು ಸೇರಿ ಆಕೆಗೆ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಾರೆ.

ಬಳಿಕ ಮತ್ತು ಬರುವ ಔಷಧ ಬೆರೆಸಿದ ಪಾನೀಯ ಕುಡಿಸಿದ್ದಾರೆ. ಯುವತಿ ಪ್ರಜ್ಞಾಹೀನಳಾಗಿದ್ದಾಳೆ. ನಂತರ ನದೀಮ್ ಹಾಗೂ ಶೋಯೆಬ್ ಅತ್ಯಾಚಾರವೆಸಗಿದ್ದಾರೆ. ಸ್ನೇಹಿತ ಶಿಫ್ತತ್ ಕೃತ್ಯದ ವೀಡಿಯೋ ಮಾಡಿದ್ದಾನೆ. ಈ ವೀಡಿಯೋ ಇಟ್ಟುಕೊಂಡು ಆಕೆಯ ಬಳಿ 50 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಅದಕ್ಕೆ ಆಕೆ ಒಪ್ಪದಿದ್ದಾಗ ಆ ಯುವತಿಯ ಜೊತೆ ಮದುವೆ ನಿಶ್ಚಯವಾಗಿದ್ದ ವರನಿಗೆ ಆ ವೀಡಿಯೋವನ್ನು ಕಳುಹಿಸಿದ್ದಾರೆ. ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲ್ ನಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾನೂನು ಕ್ರಮ ತೆಗೆದುಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ದಲಿತ ಕಾಯ್ದೆಗಳು ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.