ನವದೆಹಲಿ: ಲಕ್ಷಾಂತರ ಭಕ್ತರು ಮೆರೆದಿರುವ ಪ್ರಯಾಗ್ ರಾಜ್‍ನ ಮಹಾ ಕುಂಭಮೇಳದಲ್ಲಿ ದೆಹಲಿ ವಿಧಾನಸಭಾ ಚುನಾವಣೆಯ ದಿನದಂದೇ ಪ್ರಧಾನಿ ನರೇಂದ್ರ ಮೋದಿಯವರು ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ಪುಣ್ಯಸ್ನಾನವನ್ನು ಮಾಡಲಿದ್ದಾರೆ. ಪ್ರಧಾನಿ ಮೋದಿ ಮಾತ್ರವಲ್ಲದೆ, ರಾಷ್ಟ್ರಪತಿ ದೌಪದಿ ಮುರ್ಮು, ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ ಜಗದೀಪ್ ಧನ್ವರ್ ಕೂಡಾ ಪುಣ್ಯ ಸ್ನಾನ ಮಾಡುವ ದಿನಾಂಕವನ್ನು ನಿರ್ಣಯ ಮಾಡಲಾಗಿದೆ. ಗೃಹಸಚಿವ ಅಮಿತ್ ಶಾ ಜನವರಿ 27 ರಂದು, ಉಪರಾಷ್ಟ್ರಪತಿ ಜಗದೀಪ್ ಧನ್ವರ್ ಫೆಬ್ರವರಿ 1 ರಂದು, ರಾಷ್ಟ್ರಪತಿ ದೌಪದಿ ಮುರ್ಮು ಫೆಬ್ರವರಿ 10ರಂದು ಪ್ರಯಾಗ್ ರಾಜ್‍ನ ಮಹಾ ಕುಂಭಮೇಳದ ಗಂಗಾ ನದಿಯಲ್ಲಿ ಪುಣ್ಯಸ್ನಾನವನ್ನು ಮಾಡಲಿದ್ದಾರೆ.










