ನವದೆಹಲಿ : ದೆಹಲಿ ಮತ್ತೆ ಲಾಕ್ಡೌನ್ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಆಂತಕ ಪಡುವ ಅವಶ್ಯಕತೆಯಿಲ್ಲ. ದೆಹಲಿಯಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಹೇರಿಕೆ ಮಾಡಲ್ಲ. ಮೂರನೇ ಅಲೆ ಎದುರಿಸಲು ಸಜ್ಜಾಗಿದ್ದೇವೆ ಎಂದರು.
ಕಳೆದ ಎರಡು ದಿನಗಳಿಂದ ಪಾಸಿಟಿವಿಟಿ ಪ್ರಮಾಣವು ಶೇ. 24-25 ರಷ್ಟಿದೆ. ಅನಿವಾರ್ಯವಾಗಿ ದೆಹಲಿಯಲ್ಲಿ ರಾತ್ರಿ ಕಫ್ರ್ಯೂನಂತಹ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದರು.
ಸೋಂಕಿತರಿಗೆ ಆನ್ ಲೈನ್ ಯೋಗ ತರಗತಿ:
ದೆಹಲಿಯಲ್ಲಿ ಕೋವಿಡ್ ಸಂಖ್ಯೆ ಏರುತ್ತಿದೆ. ಪರಿಣಾಮ ಹೆಚ್ಚು ಜನರು ಹೋಮ್ ಐಸೋಲೇಶನ್ ನಲ್ಲಿ ಇದ್ದಾರೆ. ಅದಕ್ಕೆ ಅವರಿಗೆ ಮಾನಸಿಕ ನೆಮ್ಮದಿ ಮತ್ತು ಶಾಂತಿಗಾಗಿ ಆನ್ ಲೈನ್ ನಲ್ಲಿ ಯೋಗ ಕ್ಲಾಸ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಈ ಯೋಗ ಕ್ಲಾಸ್ ಗೆ ಭಾಗವಹಿಸಲು ಇಚ್ಚಿಸುವವರು ನೋಂದಾಯಿಕೊಳ್ಳಬೇಕು. ಅದಕ್ಕೆ ಲಿಂಕ್ ಅನ್ನು ಸೋಂಕಿತರಿಗೆ ಕಳುಹಿಸಲಾಗುತ್ತದೆ. ದೆಹಲಿ ಸರ್ಕಾರವು 40,000 ರೋಗಿಗಳಿಗೆ ಹೋಮ್ ಐಸೊಲೇಟಿಯಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಿದೆ ಎಂದು ಹೇಳಿದರು.










