ದೇಶದಲ್ಲಿ ಬೇಕಾಗಿರುವ ಅಗತ್ಯ ವಸ್ತುಗಳು ಸಾಕಷ್ಠಿವೆ, ಯಾರು ಚಿಂತಿಸುವ ಅಗತ್ಯವಿಲ್ಲ : ಅಮಿತ್ ಶಾ.

221
firstsuddi

ನವದೆಹಲಿ : ದೇಶದಲ್ಲಿ ಔಷಧಿ, ಆಹಾರ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದಷ್ಟು ಇವೆ. ಯಾರು ಹೆದರುವ ಅಗತ್ಯವಿಲ್ಲ ಎಂದು ಕೇಮದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ. ಈ ಕುರಿಇತು ಸರಣಿ ಟ್ವಿಠ್ ಮಾಡಿರುವ ಅವರು, “ ದೇಶದಲ್ಲಿ ಮಹಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿ ಹಗಲು ದುಡಿಯುತ್ತಿರುವ ಪೊಲೀಸರು, ವೈದ್ಯರು, ವೈದ್ಯಕೀಯ ಸಿಬ್ಬಂಧಿಗಳು, ಭದ್ರತಾ ಸಿಬ್ಬಂಧಿಗಳ ಕೊಡುಗೆ ಮಹತ್ತರವಾದದ್ದು, ಕೊರೊನಾ ನಿಯಂತ್ರಿಸಲು ಅವರು ಮಾಡುತ್ತಿರುವ ಕೆಲಸ ನಮಗೆ ಪ್ರೇರಣೆಯಾಗಬೇಕು. ಪ್ರತಿಯೊಬ್ಬರು ಲಾಕ್‍ಡೌನ್ ಆದೇಶವನ್ನು ಪಾಲಿಸಿ ಇವರ ಕೆಲಸಕ್ಕೆ ಸಹಕರಿಸಬೇಕು. ಅಲ್ಲದೇ ನಾನೊಬ್ಬ ಗೃಹ ಸಚಿವನಾಗಿ ದೇಶದಲ್ಲಿ ಆಹಾರ, ಔಷಧಿ ಸೇರಿದಂತೆ ವಿವಿಧ ಅಗತ್ಯ ವಸ್ತುಗಳು ಬೇಕಾದಷ್ಠಿದೆ ಎಂದು ದೇಶದ ಜನತೆಗೆ ಭರವಸೆ ನೀಡುತ್ತಿದ್ದೇನೆ. ಯಾರು ಕೂಡಾ ಈ ಕುರಿತು ಚಿಂತಿಸಬೇಕಿಲ್ಲ. ಶ್ರೀಮಂತರು ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತೇನೆ. ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಕೇಂದ್ರದ ಜೊತೆ ರಾಜ್ಯಗಳು ಕೈ ಜೋಡಿಸಿದ್ದು, ದೇಶದಜನತೆ ಕೂಡಾ ಲಾಕ್‍ಡೌನ್ ಆದೇಶವನ್ನು ಪಾಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.