ದೇಶದ ಜನರು ಸಂಕಷ್ಟದಲ್ಲಿರುವಾಗ ಲಸಿಕೆಯನ್ನು ರಫ್ತು ಮಾಡುವುದು ಸರಿಯೇ? : ರಾಹುಲ್ ಗಾಂಧಿ.

172
firstsuddi

ನವದೆಹಲಿ : ದೇಶದ ಜನರು ಸಂಕಷ್ಟದಲ್ಲಿರುವಾಗ ವಿದೇಶಗಳಿಗೆ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡು ಮಾಡುವುದು ಸರಿಯೇ? ಎಂದು ಕೇಂದ್ರ ಸರ್ಕಾರವನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಶ್ನಿಸಿದ್ದಾರೆ.

ಏಪ್ರಿಲ್ 11ರಿಂದ 14ರವರೆಗೆ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಂಗವಾಗಿ ದೇಶದಲ್ಲಿ ‘ಲಸಿಕಾ ಉತ್ಸವ’ ಆಚರಣೆಗೆ ಪ್ರಧಾನಮಂತ್ರಿ ಮೋದಿಯವರು ಕರೆ ನೀಡಿದ್ದಾರೆ. ಇದರ ವಿರುದ್ದ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲೂ ‘ಉತ್ಸವ’ ಬೇಕೇ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಪಕ್ಷಪಾತ ಮಾಡದೇ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕೆಲಸ ಮಾಡಬೇಕು. ಈ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.