ದೊಡ್ಮನೆಯಲ್ಲಿ ರಂಗೇರಿದ ಹೋಳಿಹಬ್ಬ!

138
firstsuddi

ಬಿಗ್ ಬಾಸ್ ಮನೆ ಮಂದಿ ನಿನ್ನೆ ಹೋಳಿಹಬ್ಬ ಆಚರಿಸಿದ್ದಾರೆ. ಬೆಳಗ್ಗೆ ಎಳುತ್ತಿದ್ದಂತೆಯೇ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಪ್ರೀತ್ಸೆ ಸಿನಿಮಾದ ‘ಹೋಳಿ’ ಸಾಂಗ್ ಪ್ಲೇ ಮಾಡುವುದರ ಮೂಲಕ ಬಿಗ್ ಬಾಸ್ ಮನೆಮಂದಿಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಬಳಿಕ ಫ್ರೆಶ್ ಆಪ್ ಆಗಿ ಬಂದ ಬಿಗ್ ಬಾಸ್ ಸ್ಪರ್ಧಿಗಳು ಗಾರ್ಡನ್ ಏರಿಯಾದ ಮೇಜಿನ ಮೇಲೆ ಇಟ್ಟಿದ್ದ ಬಣ್ಣಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹಚ್ಚಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಡಿಕೆ ಸಿನಿಮಾದ ‘ಸೆಸಮ್ಮ’ ಹಾಡಿಗೆ ಶುಭ ಪೂಂಜಾ ಹಾಗೂ ಮಂಜು ಸಖತ್ ಸ್ಟೆಪ್ ಹಾಕಿದರೆ, ಮನೆಯ ಉಳಿದ ಸದಸ್ಯರು ನೆಲದ ಮೇಲೆ ಉರುಳಾಡಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಬಣ್ಣದ ಆಟ ಆಡುವ ಮೂಲಕ ಮನೆಮಂದಿ ಸಖತ್ ಎಂಜಾಯ್ ಮಾಡಿದ್ದಾರೆ.