ನಟನೆಯಿಂದ ವಿರಾಮ ಪಡೆದು ಕುಟುಂಬದೊಂದಿಗೆ ಸಮಯ ಕಳೆಯಲು ನಿರ್ಧರಿಸಿದ ಅಮೀರ್ ಖಾನ್.

84
firstsuddi

ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ನಟನೆಯಿಂದ ವಿರಾಮ ಪಡೆದು, ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ನಿರ್ಧರಿಸದ್ದಾರಂತೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಗ್ಗೆ ಅಮಿರ್ ಖಾನ್ ಅವರಿಗೆ ಅಪಾರ ನಂಬಿಕೆಯಿತ್ತು. ಈ ಸಿನಿಮಾ ಅದ್ಭುತ ಯಶಸ್ಸು ಗಳಿಸುತ್ತದೆ ಎಂದೇ ನಂಬಲಾಗಿತ್ತು. ಆದರೆ ಆ ನಂಬಿಕೆ ಸುಳ್ಳಾಯಿತು. ಅಂದುಕೊಂಡಷ್ಟು ಸಿನಿಮಾ ಗೆಲ್ಲಲಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಕಮಾಯಿ ಮಾಡಲಿಲ್ಲ. ಹಾಗಾಗಿ ಆಮೀರ್ ಅವರಿಗೆ ಹಿನ್ನೆಡೆ ಆಯಿತು.

ಅಮೀರ್ ಇತ್ತೀಚೆಗೆ ದೆಹಲಿಯಲ್ಲಿ ತಮ್ಮ ಬಾಲ್ಯದ ಗೆಳೆಯರೊಬ್ಬರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಚಾಟ್ ಸೆಷನ್ ಗಾಗಿ ಬಂದಿದ್ದರು. ಈ ವೇಳೆ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ ಅಮೀರ್, ನಾನು ನಟನಾಗಿ ಸಿನಿಮಾ ಮಾಡುವಾಗ, ನನ್ನ ಜೀವನದಲ್ಲಿ ಬೇರೇನೂ ಆಗುವುದಿಲ್ಲ. ಸಿನಿಮಾದಲ್ಲಿ ನಾನು ತುಂಬಾ ಕಳೆದುಹೋಗುತ್ತೇನೆ. ನಾನು ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ, ನನ್ನ ಕುಟುಂಬದೊಂದಿಗೆ, ನನ್ನ ತಾಯಿ, ನನ್ನ ಮಕ್ಕಳೊಂದಿಗೆ ಇರಲು ಬಯಸುತ್ತೇನೆ ಎಂದಿದ್ದಾರೆ.

ಚಾಂಪಿಯನ್ ಸಿನಿಮಾ ಬಗ್ಗೆ ಮಾತನಾಡಿದ ನಟ ನಾನು ನಿರ್ಮಾಪಕನಾಗಿ ಕೆಲಸ ಮಾಡುತ್ತೇನೆ. ಆದ್ದರಿಂದ ನಾನು ಚಾಂಪಿಯನ್ಸ್ ಅನ್ನು ನಿರ್ಮಿಸುತ್ತೇನೆ. ನಾನು ಮಾಡಲಿದ್ದ ಪಾತ್ರಕ್ಕೆ ಬೇರೆ ನಟರನ್ನು ಸಂಪರ್ಕಿಸುತ್ತೇನೆ ಎಂದಿದ್ದಾರಂತೆ.