ಸಾನಿಯಾ ಮಿರ್ಜಾ ಹುಟ್ಟುಹಬ್ಬ.. ಡಿವೋರ್ಸ್ ವದಂತಿ ಬೆನ್ನಲ್ಲೇ ಶೋಯೆಬ್ ಮಲಿಕ್ ವಿಶ್…

99
firstsuddi

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೀಗ ಸಾನಿಯಾ ದಂಪತಿಯ ವಿಚ್ಛೇದನ ವದಂತಿ ಬೆನ್ನಲ್ಲೇ , ಶೋಯೆಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಅವರ ಜನ್ಮದಿನದಂದು ಟ್ವಿಟರ್ ನಲ್ಲಿ ಶುಭ ಹಾರೈಸಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಸಾನಿಯಾ ಮಿರ್ಜಾ, ಸದಾ ನಿಮಗೆ ಆರೋಗ್ಯ ಮತ್ತು ಖುಷಿಯ ಜೀವನವಿರಲಿ ಎಂದು ಆಶಿಸುತ್ತೇನೆ ಎಂದು ಶೋಯೆಬ್ ವಿಶ್ ಮಾಡಿದ್ದಾರೆ.  ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ವೈಮನಸ್ಸನ್ನು ಮರೆತು ಪ್ರೀತಿಸಿ ಈ ಜೋಡಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆ ಬಳಿಕ 2018ರಲ್ಲಿ ಒಂದು ಮುದ್ದಾದ ಗಂಡು ಮಗವನ್ನು ಪಡೆದಿದ್ದರು. ಆದರೆ ಇದೀಗ ಈ ಜೋಡಿ ಮಧ್ಯೆ ಬಿರುಕು ಕಂಡುಬಂದಿದ್ದು ಬೇರೆ ಬೇರೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಈ ಎಲ್ಲಾ ವದಂತಿಗೂ ತೆರೆ ಬಿದ್ದಿದೆ. ಒಂದು ವೇಳೆ ಡಿವೋರ್ಸ್ ಆಗೋದಾದರೆ, ಅಧಿಕೃತವಾಗಿ ಈ ಜೋಡಿ ತಿಳಿಸುವವರೆಗೂ ಕಾದುನೋಡಬೇಕಿದೆ.