ನಟಿ ಐಶ್ವರ್ಯಾ ರೈಗೆ ನೋಟಿಸ್ ಜಾರಿ…

65
firstsuddi

ಮುಂಬೈ : ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರಿಗೆ ನಾಸಿಕ್ ಭೂಕಂದಾಯ ಇಲಾಖೆ ನೋಟಿಸ್ ನೀಡಿದೆ.

ಐಶ್ವರ್ಯಾ ರೈ ನಾಸಿಕ್ ಜಿಲ್ಲೆಯ ಸಿನ್ನಾರ್ ನ ತಂಗಾವ್ ಬಳಿಯ ಅಡ್ವಾಡಿಯ ಗುಡ್ಡಗಾಡು ಪ್ರದೇಶದಲ್ಲಿ 1 ಹೆಕ್ಟೇರ್ ಗೂ ಹೆಚ್ಚು ಜಮೀನು ಹೊಂದಿದ್ದಾರೆ. ಈ ಬಗ್ಗೆ ತೆರಿಗೆ ಕಟ್ಟುವಂತೆ ನೀಡಲಾಗಿದ್ದ ಗಡುವು ಮುಗಿದಿದ್ದರೂ 22,000 ರೂ. ಭೂ ಕಂದಾಯ ಪಾವತಿಸದೇ ಇರುವುದಕ್ಕೆ ಅವರಿಗೆ ನೋಟಿಸ್ ನೀಡಲಾಗಿದೆ.

ನಾಸಿಕ್ ಜಿಲ್ಲಾಡಳಿತ ಇದಕ್ಕೂ ಮುನ್ನ ಐಶ್ವರ್ಯಾ ರೈ ಅವರಿಗೆ ತೆರಿಗೆ ಪಾವತಿ ಮಾಡುವಂತೆ ಹಲವು ಬಾರಿ ನೋಟಿಸ್ ನೀಡಿತ್ತು. ಆದರೂ ಅವರು ತೆರಿಗೆ ಪಾವತಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ತೆರಿಗೆ ಪಾವತಿ ಮಾಡದಿರುವ ಸಂಬಂಧ ನಟಿ ಐಶ್ವರ್ಯಾ ಸೇರಿದಂತೆ ತೆರಿಗೆ ಕಟ್ಟದ 1,200 ಇತರ ಆಸ್ತಿ ಮಾಲೀಕರಿಗೆ ಕಂದಾಯ ಇಲಾಖೆ ನೋಟಿಸ್ ನೀಡಿದೆ. ಮಾರ್ಚ್ ಅಂತ್ಯದವರೆಗೆ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಿದ್ದರಿಂದ ಈ ನೋಟಿಸ್ ಜಾರಿ ಮಾಡಲಾಗಿದೆ.