ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಮತ್ತೊಂದು ಎಫ್ಐಆರ್ – ಪತಿಯಿಂದಲೇ ದೂರು…

95
firstsuddi

ಬೆಂಗಳೂರು: ಖ್ಯಾತ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಅವರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಸ್ವರ್ಣಲತಾ ವಿರುದ್ಧ ಪತಿ ಸುಭಾಕರ್ ರಾವ್ ಸುರಪನೇನಿ ಅವರು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸರ ಪ್ರಕಾರ, ನಟಿ ಶ್ರೀಲೀಲಾ ಪೋಷಕರ ನಡುವಿನ ವಿಚ್ಛೇದನ ಅರ್ಜಿ ನ್ಯಾಯಾಲಯದಲ್ಲಿದೆ. ಈ ದಂಪತಿ 20 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಬೆಂಗಳೂರಿನ ಕೋರಮಂಗಲದ ಅಪಾರ್ಟ್​​​ಮೆಂಟ್ ​​ಒಂದರಲ್ಲಿ ಸುಭಾಕರ್ ರಾವ್ ಅವರ ಫ್ಲ್ಯಾಟ್ ಇದೆ. ಅದನ್ನು ಸ್ವರ್ಣಲತಾಗೆ ಸುಭಾಕರ್ ನೀಡಿದ್ದರು. ಆದರೆ ನಂತರ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಆದಾಗ ಆ ಫ್ಲ್ಯಾಟ್ ಗೆ ಸುಭಾಕರ್ ಬೀಗ ಹಾಕಿದ್ದರು. ಅಕ್ಟೋಬರ್ 3ರಂದು ಸ್ವರ್ಣಲತಾ ಅವರು ಬೀಗ ಒಡೆದು ಫ್ಲ್ಯಾಟ್ ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಸುಭಾಕರ್ ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಅಲಯನ್ಸ್ ವಿಶ್ವವಿದ್ಯಾಲಯ ಒಳಗೆ ಅತಿಕ್ರಮ ಪ್ರವೇಶ ಮಾಡಿದರು ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿದ್ದರು ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿತ್ತು. ಬಳಿಕ ನಿರೀಕ್ಷಣಾ ಜಾಮೀನು ಕೂಡ ಪಡೆದುಕೊಂಡಿದ್ದರು. ಇದೀಗ ಮತ್ತೊಂದು ಪ್ರಕರಣದಿಂದಾಗಿ ಸ್ವರ್ಣಲತಾ ಅವರಿಗೆ ಸಂಕಷ್ಟ ಎದುರಾಗಿದೆ.