ಚೆನ್ನೈ : ತಮಿಳು ನಟ ವಿಶಾಲ್ ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಚೆನ್ನೈನ ಅಣ್ಣಾನಗರದಲ್ಲಿ ನಟ ವಿಶಾಲ್ ಕುಟುಂಬ ಸಮೇತ ವಾಸವಾಗಿದ್ದಾರೆ. ಆದರೆ ಸೆಪ್ಟಂಬರ್ 26ರಂದು ರಾತ್ರಿ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾಗಿದ್ದಾರೆ. ಪರಿಣಾಮ ಕಿಟಕಿ ಗಾಜುಗಳು ಒಡೆದಿವೆ.
ಘಟನೆಯ ಕುರಿತು ವಿಶಾಲ್ ಅವರ ಮ್ಯಾನೇಜರ್ ಹರಿಕೃಷ್ಣನ್ ಅವರು ಸಿಸಿಟಿವಿ ಸಾಕ್ಷ್ಯಗಳೊಂದಿಗೆ ಅಣ್ಣಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟ ವಿಶಾಲ್ ಶೂಟಿಂಗ್ ಗಾಗಿ ವಿದೇಶ ಪ್ರವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ.










