ನದಿಗೆ ಉರುಳಿ ಬಿದ್ದ ಬಸ್ – ಆರು ಐಟಿಬಿಪಿ ಯೋಧರು ಸಾವು…

76
firstsuddi

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನ ಫ್ರಿಸ್ಲಾನ್ ನಲ್ಲಿ ಐಟಿಬಿಪಿ ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್ ನದಿಗೆ ಉರುಳಿದೆ. ಈ ದುರ್ಘಟನೆಯಲ್ಲಿ ಆರು ಐಟಿಬಿಪಿ ಯೋಧರು ಸಾವನ್ನಪ್ಪಿದ್ದಾರೆ.

ಅಮರನಾಥ ಯಾತ್ರೆಗಾಗಿ ನಿಯೋಜಿಸಲಾಗಿದ್ದ ಯೋಧರು ಇಂದು ಕಾರ್ಯಕ್ಕೆ ತೆರಳುತ್ತಿದ್ದರು. 39 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಚಂದನ್ವಾರಿಯಿಂದ ಪಹಲ್ಗಾಮ್ ಕಡೆ ಪ್ರಯಾಣ ಬೆಳೆಸಿತ್ತು. ಫ್ರಿಸ್ಲಾನ್ ನಲ್ಲಿ ವಾಹನದ ಬ್ರೇಕ್ ಫೇಲ್ ಆಗಿದ್ದು, ರಸ್ತೆ ಬದಿಯ ನದಿಗೆ ಬಿದ್ದಿದೆ ಎಂದು ಐಟಿಬಿಪಿ ತಿಳಿಸಿದೆ.

ಸಂಭವಿಸಿದ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಏರ್ ಲಿಫ್ಟ್ ಮಾಡಿ ಶ್ರೀನಗರದ ಸೇನಾಸ್ಪತ್ರೆಗೆ  ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.