ನದಿಗೆ ಸೇನಾ ವಾಹನ ಉರುಳಿ ಬಿದ್ದು ಏಳು ಯೋಧರು ಹುತಾತ್ಮ…

46
firstsuddi

ಶ್ರೀನಗರ : 26 ಸೇನಾ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಸೇನಾ ವಾಹನವೊಂದು ನದಿಗೆ ಉರುಳಿ ಬಿದ್ದ ಪರಿಣಾಮ 7 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

26 ಸೈನಿಕರ ತಂಡ ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್ ನಿಂದ ಮುಂದಿನ ಸ್ಥಳಕ್ಕೆ ಪ್ರಯಾಣಿಸುತ್ತಿತ್ತು. ಬೆಳಗ್ಗೆ 9 ಗಂಟೆಗೆ ಥೋಯಿಸ್ ನಿಂದ 25 ಕಿಲೋ ಮೀಟರ್ ದೂರ ಚಲಿಸಿದ ಬಳಿಕ ಸೇನಾ ವಾಹನ ಸ್ಕಿಡ್ ಆಗಿ ಲಡಾಖ್ ನ ತುರ್ತುಕ್ ಸೆಕ್ಟರ್ ನ ಶ್ಯೋಕ್ ನದಿಯಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಏಳು ಯೋಧರು ಹುತಾತ್ಮರಾಗಿದ್ದಾರೆ.

ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ವೆಸ್ಟರ್ನ್ ಕಮಾಂಡ್ ಗೆ ಸ್ಥಳಾಂತರಿಸಲು ವಾಯುಪಡೆಯಿಂದ ನೆರವನ್ನು ಕೋರಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.