ಕೊಟ್ಟಿಗೆಹಾರ : ಬಂಕೇನಹಳ್ಳಿಯಲ್ಲಿ ಹೇಮಾವತಿ ಸೇತುವೆಯ ಸಮೀಪ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಸಂತ್ರಸ್ತರಿಗೆ ಪರ್ಯಾಯ ಜಾಗವನ್ನು ನೀಡಬೇಕು ಎಂದು ಬಂಕೇನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಗ್ರಾ.ಪಂ ಸದಸ್ಯೆ ಶಶಿಕಲಾ, ಹೇಮಾವತಿ ನದಿ ತೀರದ ದಿಬ್ಬದ ಮೇಲೆ ಸುಮಾರು 40 ಕ್ಕೂ ಹೆಚ್ಚು ಮನೆಗಳಿದ್ದು ಮಳೆಗಾಲದಲ್ಲಿ ನದಿ ನೀರಿನ ರಭಸ ಹೆಚ್ಚಾಗಿ ನದಿತೀರದ ದಿಬ್ಬದ ಕುಸಿಯುವುದರಿಂದ ದಿಬ್ಬದ ಮೇಲೆ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ. ಎರಡು ವರ್ಷ ಹಿಂದೆಯೆ ಸ್ಥಳಕ್ಕೆ ಹಲವಾರು ಜನಪ್ರತಿನಿಧಿಗಳು, ಅಧಿಕಾರಿಗಳು ಬೇಟಿ ನೀಡಿ ಬೇರೆ ಕಡೆ ನಿವೇಶನ ನೀಡುವ ಭರವಸೆ ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಕುಟುಂಬಗಳು ಆತಂಕದಲ್ಲಿ ಬದುಕುವಂತಾಗಿದ್ದು ಪರ್ಯಾಯ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರಯ್ಯ, ಶಂಕರ್, ಯಶೋಧ, ರಮೇಶ್, ವಸಂತ್, ಸಂತೋಷ್, ಕುಮಾರಿ, ಪಾರ್ವತಿ ಮುಂತಾದವರು ಇದ್ದರು.










