ಅಕ್ರಮ ಸಂಬಂಧ ಶಂಕೆ – ಕೊಡಲಿಯಿಂದ ಹೊಡೆದು ಪತ್ನಿಯನ್ನೇ ಕೊಂದ!

73
firstsuddi

ಬಾಗಲಕೋಟೆ : ಅಕ್ರಮ ಸಂಬಂಧ ಶಂಕಿಸಿ ಪತಿಯೇ ಪತ್ನಿಯನ್ನ ಕೊಡಲಿಯಿಂದ ತಲೆಗೆ ಹೊಡೆದು ಹತ್ಯೆಗೈದಿರುವ ಘಟನೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ತೋಳಮಟ್ಟಿ ಗ್ರಾಮದಲ್ಲಿ ನಡೆದಿದೆ.

ಯಲ್ಲವ್ವ ಯಲ್ಲಪ್ಪ ಮಾದರ (24) ಪತಿಯಿಂದ ಕೊಲೆಯಾದ ಪತ್ನಿ. ಕೊಲೆ ಮಾಡಿದ ಬಳಿಕ ಪತಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.