ನದಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ 15 ದಿನದ ಮಗುವಿನ ರಕ್ಷಣೆ…

165
firstsuddi

ಯಾದಗಿರಿ : ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ 15 ದಿನದ ಪುಟ್ಟ ಕಂದಮ್ಮನನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಶಹಪುರ ತಾಲ್ಲೂಕಿನ ರೋಜಾ ಗ್ರಾಮದ ಬಳಿ ನಡೆದಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಮಾ ನದಿಯ ಹಿನ್ನೀರು ಗ್ರಾಮಕ್ಕೆ ನುಗ್ಗಿ ಸಂಪೂರ್ಣ ಜಲಾವೃತಗೊಂಡಿತ್ತು. ಈ ಹಿನ್ನೆಲೆ, ಗ್ರಾಮಸ್ಥರನ್ನು ತೆಪ್ಪದ ಮೂಲಕ ರಕ್ಷಿಸಲಾಗುತ್ತಿತ್ತು. ಈ ವೇಳೆ ತೆಪ್ಪದಲ್ಲಿ ಗ್ರಾಮಸ್ಥರನ್ನು ಸ್ಥಳಾಂತರ ಮಾಡುತ್ತಿದ್ದಾಗ ತೆಪ್ಪ ಅಲುಗಾಡಿ ತಾಯಿ ರಜಿಯಾ ಎಂಬುವವರ ಕೈಯಿಂದ 15 ದಿನದ ಪುಟ್ಟು ಮಗು ನದಿಗೆ ಜಾರಿ ಬಿದ್ದು ಕೊಚ್ಚಿಕೊಂಡು ಹೋಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಮೀನುಗಾರರು ಮಗುವನ್ನು ರಕ್ಷಿಸಿ ತಾಯಿಯ ಮಡಿಲು ಸೇರಿಸಿದ್ದಾರೆ.