ನಮ್ಮಲ್ಲಿ ಯಾವುದೇ ಬಣ-ಗುಂಪುಗಾರಿಕೆ ಇಲ್ಲ : ಶೋಭಾ ಕರಂದ್ಲಾಜೆ.

796

ಚಿಕ್ಕಮಗಳೂರು : ಸಿದ್ದರಾಮಯ್ಯ ಅಂದ್ರೆ, ಟಿಪ್ಪು ಜಯಂತಿ ಮಾಡಿದ್ರು, ಸಮಾಜ-ಸಮಾಜ ಒಡೆದ್ರು, ಲಿಂಗಾಯುತ-ವೀರಶೈವರನ್ನ ಒಡೆದ್ರು ಅನ್ನೋದನ್ನ ಬಿಟ್ಟರೆ ಜನ ಬೇರೆ ಯಾವುದನ್ನು ನೆನಪಿಟ್ಟುಕೊಂಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸದಿಂದ ಜನ ಸಿದ್ದರಾಮಯ್ಯನನ್ನ ನೆನಪಿಟ್ಟುಕೊಂಡಿಲ್ಲ. ಇಂತಹಾ ಒಳ್ಳೆಯ ಅಭಿವೃದ್ಧಿ ಕೆಲಸವಾಯಿತು, ಇಂತಹಾ ದೊಡ್ಡ ಪ್ರಾಜೆಕ್ಟ್ ಬಂತು ಎಂದು ಯಾರೂ ಸಿದ್ದರಾಮಯನನ್ನು ನೆನಪಿಟ್ಟುಕೊಂಡಿಲ್ಲ ಎಂದರು. ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ. ಅವರ ಪಕ್ಷದೊಳಗೆ ಅವರು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಮುನಿಯಪ್ಪ-ಸಿದ್ದರಾಮಯ್ಯ ಹೇಗೆ ಕಿತ್ತಾಡಿದರು ಅನ್ನುವುದನ್ನು ನಾವು ನೋಡಿದ್ದೇವೆ. ಈ ಒಂದು ಹತಾಶೆ ಮನೋಭಾವದಿಂದ ಅವರು ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಕಾಂಗ್ರೆಸ್ಸಿಗರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಯಾಕೆಂದರೆ, ಕಾಂಗ್ರೆಸ್ ನವರು ಎನ್.ಡಿ.ಆರ್.ಎಫ್, ಹಾಗೂ ಎಸ್.ಟಿ.ಆರ್.ಎಫ್ನಲ್ಲಿ ರಾಜ್ಯಕ್ಕೆ ಎಷ್ಟು ಹಣ ಕೊಟ್ರೋ ಅದರ ಎರಡರಷ್ಟು ಹಣವನ್ನ ಐದು ವರ್ಷದಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ಕೊಟ್ಟಿದೆ. ಅಧಿಕಾರವಿದ್ದಾಗ ಕಾಂಗ್ರೆಸ್ ಏನ್ ಮಾಡಿದೆ ಅನ್ನುವುದನ್ನು ನಾವೇ ನೋಡಿದ್ದೇವೆ ಎಂದರು. ನೆರೆ ಪರಿಹಾರಕ್ಕೆ ತಾತ್ಕಾಲಿಕವಾಗಿ ಹಣ ಬಿಡುಗಡೆಯಾಗಿದೆ. ಎನ್.ಡಿ.ಆರ್.ಎಫ್ನಿಂದಲೂ ಹಣ ಬಿಡುಗಡೆಯಾಗಿದೆ. ಶಾಶ್ವತ ಪರಿಹಾರಕ್ಕೆ ಶೀಘ್ರವೇ ಹಣ ಬಿಡುಗೊಡೆಯಾಗುತ್ತೆ ಎಂದರು.