ನವಭಾರತದ ನಾಗರೀಕರು ಸದೃಢರವಾಗುವಲ್ಲಿ ಗಮನ ಹರಿಸಬೇಕು : ನರೇಂದ್ರ ಮೋದಿ…

220
firstsuddi

ನವದೆಹಲಿ : ಅಂತರಾಷ್ಟ್ರೀಯ ಕ್ರೀಡಾ ದಿನಾವರಣೆಯ ಅಂಗವಾಗಿ ಇಂದು ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಮೊದಲಿಗೆ ಆರೋಗ್ಯದಿಂದ ಎಲ್ಲಾ ಕೆಲಸ-ಕಾರ್ಯಗಳು ಪೂರ್ಣಗೊಳ್ಳುತ್ತಿದ್ದವು. ಆದರೆ ಈಗಾ ಎಲ್ಲವೂ ಸ್ವಾರ್ಥದಿಂದ ಪೂರ್ಣಗೊಳ್ಳುತ್ತಿವೆ. ಸ್ವಾರ್ಥ ಮನೋಭಾವನೆ ಸ್ವಾಸ್ಥ್ಯ ಮಮೋಭಾವನೆಯಾಗಬೇಕು. ನವಭಾರತದ ನಾಗರೀಕರು ಸದೃಢರವಾಗುವಲ್ಲಿ ಗಮನ ಹರಿಸಬೇಕು. ನಾಗರೀಕರು ತಂತ್ರಜ್ಞಾನ ಬಂದ ಬಳಿಕ ದೈಹಿಕ ಚಟುವಟಿಕೆಗಳ ಕಡೆ ಗಮನಹರಿಸುವುದು ಕಡಿಮೆಯಾಗಿದೆ. ಕ್ರೀಡೆ ಫಿಟ್ನೆಸ್‍ನೊಂದಿಗೆ ನೇರವಾದ ಸಂಬಂಧ ಹೊಂದಿದ್ದು, ನಮ್ಮ ಕ್ರೀಡಾಪಟುಗಳು ಪಡೆಯುವ ಮೆಡಲ್‍ಗಳು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.