ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಷಯ ಕೋರಿದ ಪ್ರಧಾನಿ ನರೇಂದ್ರ ಮೋದಿ…

297
firstsuddi

ನವದೆಹಲಿ : ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಮೂಲಕ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಷಯವನ್ನು ಕೋರಿದ್ದಾರೆ. “ಪ್ರಕೃತಿ, ಸಂಪ್ರದಾಯ ಹಾಗೂ ಸಂಸ್ಕೃತಿಯ ಬಣ್ಣಗಳಿಂದ ತುಂಬಿರುವ ಸಮೃದ್ಧವಾದ ಮಕರ ಸಂಕ್ರಾಂತಿ ಹಬ್ಬದ ಶುಭಾಷಯಗಳು” ಎಂದು ಟ್ವೀಟ್ ಮಾಡಿದ್ದು, ಅಲ್ಲದೇ ಪೊಂಗಲ್ ಹಾಗೂ ಮಹಾಬಿಹು ಹಬ್ಬದ ಶುಭಾಷಯವನ್ನು ತಿಳಿಸಿದ್ದಾರೆ. “ಮಹಾ ಬಿಹು ಭರವಸೆ ಹಾಗೂ ಸಮೃದ್ಧಿಯನ್ನು ಸೂಚಿಸುತ್ತದೆ. ನನ್ನ ಅಸ್ಸಾಂ ಸಹೋದರ ಹಾಗೂ ಸಹೋದರಿಯರಿಗೆ ಮಹಾ ಬಿಹು ಹಬ್ಬದ ಶುಭಾಷಯಗಳು ಎಂದು ಮತ್ತೊಂದು ಟ್ವೀಟ್‍ನಲ್ಲಿ ತಿಳಿಸಿದ್ದು, “ಎಲ್ಲರಿಗೂ ಪೊಂಗಲ್ ಹಬ್ಬದ ಶುಭಾಷಯಗಳು. ಈ ಹಬ್ಬ ಪ್ರತಿಯೊಬ್ಬರ ಜೀವನವನ್ನು ಸಮೃದ್ಧಯಿಂದ ತುಂಬಲಿ. ಎಲ್ಲರಿಗೂ ಉತ್ತಮ ಉತ್ತಮ ಆರೋಗ್ಯ ಸಿಗಲಿ ಎಂದು ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ.