ನಾದಬ್ರಹ್ಮ ಹಂಸಲೇಖ ಅವರಿಗೆ 70ನೇ ಹುಟ್ಟುಹಬ್ಬ ಸಂಭ್ರಮ…

90
firstsuddi

ಬೆಂಗಳೂರು : ಇಂದು ‘ನಾದಬ್ರಹ್ಮ’ ಹಂಸಲೇಖ ಅವರ ಹುಟ್ಟುಹಬ್ಬ. ಭಾರತೀಯ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರಲ್ಲಿ ಹಂಸಲೇಖ ಅವರು ಒಬ್ಬರು.

1951 ರಲ್ಲಿ ನಗರದ ಅಕ್ಕಿಪೇಟೆ ಬಳಿಯ ತುಳಸಿಕಟ್ಟೆಯಲ್ಲಿ ಜನಿಸಿದ ಹಂಸಲೇಖ ಅವರು  “ತ್ರಿವೇಣಿ ಸಂಗಮ ಚಿತ್ರದ ನೀನಾ ಭಗವಂತ ಹಾಡು ಹಂಸಲೇಖ ಅವರು ಮೊದಲು ಸಂಗೀತ ಸಂಯೋಜಿಸಿದ ಹಾಡು. ಹೀಗೆ ಪ್ರಾರಂಭವಾದ ಹಂಸಲೇಖ ಅವರ ಸಂಗೀತ ಪಯಣ ಅವರನ್ನು ದೊಡ್ಡ ಸಂಗೀತ ನಿರ್ದೇಶಕನ್ನಾಗಿ ಮಾಡಿತು. ಹಂಸಲೇಖ ಅವರು ಕನ್ನಡ ಮಾತ್ರವಲ್ಲದೆ, ಮಳಯಾಲಂ, ತೆಲುಗು ಮತ್ತು ತಮಿಳು ಸೇರಿ ಒಟ್ಟು 500 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿದೇರ್ಶನ ಮಾಡಿದ್ದಾರೆ.

ಸಂಗೀತ ಲೋಕದ ಸಾಧನೆಗಾಗಿ ಹಂಸಲೇಖ ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ. 1995 ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿ, ಗಾನಯೋಗಿ ಪಂಚಾಕ್ಷರಿಕ ಗವಾಯಿ ಪ್ರಶಸ್ತಿ, 2005 ರಲ್ಲಿ ಸನ್ಫೀಸ್ಟ್ ಉದಯ ಫಿಲ್ಮ್ ಅರ್ವಾರ್ಡ್ ಮತ್ತು ಕೆಂಪೇಗೌಡ ಪ್ರಶಸ್ತಿ, 2012 ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ. ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಹಂಸಲೇಖ ಅವರಿಗೆ ಲಭಿಸಿದೆ.