ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ದಿನೇಶ್ ಕಲ್ಲಹಳ್ಳಿ ಅವರು ಥಂಡಾ ಹೊಡೆದಿದ್ದಾರೆ.
ಕನಕಪುರದ ದಿನೇಶ್ ಕಲ್ಲಹಳ್ಳಿ ಅವರು ಸಿಡಿ ಕೇಸ್ನಲ್ಲಿ ನಾನು ನಿರಪರಾಧಿ ಎಂದು ಹೇಳಿಕೆ ನೀಡಿದ್ದಾರೆ. ನಾನು ಒತ್ತಾಯಕ್ಕೆ ಒಳಗಾಗಿದ್ದೆ, ಒತ್ತಾಯದಿಂದ ದೂರು ಕೊಟ್ಟಿದ್ದೇನೆ. ಹುಡುಗಿಗೆ ನ್ಯಾಯ ಕೊಡಿಸಬೇಕು ಅಂತ ಒತ್ತಾಯ ಮಾಡಿದ್ದರು. 3 ದಿನಗಳ ಕಾಲ ನಿರಂತರವಾಗಿ ಕರೆ ಮಾಡಿದ್ದರಿಂದ ನಾನು ದೂರು ಕೊಡಲು ನಿರ್ಧರಿಸಿದೆ. ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಗೆ 3 ಪುಟಗಳ ಹೇಳಿಕೆ ನೀಡಿದ್ದಾರೆ.
ನಾನು ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದವನು. ಸಾಕಷ್ಟು ವರ್ಷಗಳಿಂದ ಸಾಮಾಜಿಕ ಹೋರಾಟವನ್ನು ಮಾಡುತ್ತಿದ್ದೇನೆ. ಪಕ್ಷಾತೀತವಾಗಿ ನಾನು ಹೋರಾಟ ಮಾಡಿದ್ದು, ಇದುವರೆಗೂ ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ.
ನಾನು ಹೋರಾಟಗಳಲ್ಲಿ ಸಾಕಷ್ಟು ಗೆಲುವು ಸಾಧಿಸಿದ್ದು, ಜೊತೆಗೆ ನ್ಯಾಯವನ್ನು ದೊರಕಿಸಿಕೊಟ್ಟಿದ್ದೇನೆ. ನಾನು ಈ ರೀತಿಯ ಹೋರಾಟ ಮಾಡುವಾಗ ಸಾಕಷ್ಟು ಜನರ ಪರಿಚಯವಿತ್ತು. ಹೀಗೆ ಪರಿಚಯ ಆದವರ ಹೆಸರಲ್ಲಿ ಲಕ್ಷ್ಮಿಪತಿಯೂ ಒಬ್ಬರು.
ನಾನು ಅವರ ಜೊತೆ ಸಾಕಷ್ಟು ವರ್ಷಗಳಿಂದ ಒಡನಾಟ ಇಟ್ಟುಕೊಂಡಿದ್ದೆ. ಹೀಗೆ ಪರಿಚಯ ಇದ್ದ ಲಕ್ಷ್ಮಿಪತಿಯವರು ಎಸಿಬಿ ಒಂದರ ಸುದ್ದಿಯ ವಿಚಾರಕ್ಕೆ ಮಾತನಾಡಿದ್ದರು. ಹೋರಾಟ ಮಾಡಿ ನ್ಯಾಯ ಒದಗಿಸಬೇಕು ಅಂತ ಕೇಳಿಕೊಂಡರು. ಅವಾಗ ನಾನು ಈ ವಿಚಾರವಾಗಿ ತಿಳಿದುಕೊಂಡಿರಲಿಲ್ಲ. ಬಳಿಕ ವಿಚಾರ ಏನು ಎಂಬುದನ್ನು ತಿಳಿದುಕೊಳ್ಳವ ಪ್ರಯತ್ನ ಮಾಡಿದೆ.
ಆ ಸಂದರ್ಭದಲ್ಲಿ ರಾಸಲೀಲೆಗೆ ಸಂಬಂಧಪಟ್ಟ ವಿಚಾರ ಎನ್ನುವುದು ಗೊತ್ತಾಯ್ತು. ಆ ಬಳಿಕ ನಾನು ಈ ವಿಚಾರವನ್ನು ಮಾಡೋದಿಲ್ಲ ಅಂತ ಹೇಳಿದೆ. ಆದರೆ ಲಕ್ಷ್ಮಿಪತಿಯವರು ನನಗೆ ಒತ್ತಾಯ ಮಾಡಿದರು. ಎಷ್ಟೋ ಹೋರಾಟಗಳನ್ನು ನೀವು ಮಾಡಿದ್ದೀರಿ. ಈ ಹೋರಾಟವನ್ನು ನೀವೇ ಮಾಡಿದ್ರೆ ಅದರ ಬಲವೇ ಬೇರೆ ಆಗುತ್ತೆ. ಒಳ್ಳೆಯ ಹೆಸರು ಕೂಡ ಬರುತ್ತೆ, ಜೊತೆಗೆ ಅನ್ಯಾಯಕ್ಕೆ ಒಳಗಾದ ಯುವತಿಗೆ ನ್ಯಾಯವನ್ನು ನೀವೇ ನಿಂತು ಕೊಡಿಸಬೇಕು ಅಂತ ಒತ್ತಾಯ ಮಾಡಿದ್ದರು.
ಮೂರು ದಿನಗಳ ಒತ್ತಾಯದ ಬಳಿಕ ನಾನು ಒಪ್ಪಿಕೊಂಡೆ. ಬಳಿಕ ಲಕ್ಷ್ಮಿಪತಿ ಅವರು ನಮ್ಮ ಹಳ್ಳಿಗೆ ಬಂದು ಸಿಡಿಯನ್ನು ಕೊಟ್ಟಿದ್ದರು. ನಾನು ಆ ಸಿಡಿಯನ್ನು ನಾನು ಪ್ಲೇ ಮಾಡಿಯೂ ನೋಡಿರಲಿಲ್ಲ. ಬಳಿಕ ಮಾಧ್ಯಮಗಳಿಗೆ ತಿಳಿಸಿ ಕಮಿಷನರ್ ಕಚೇರಿಗೆ ಬಂದು ದೂರು ಕೊಟ್ಟೆ. ಇದರಲ್ಲಿ ನಾನೂ ಪಾಲುದಾರನೂ ಅಲ್ಲ, ಪಾಲನ್ನು ಕೂಡ ಪಡೆದಿಲ್ಲ ಎಂದರು.










