ನಾನು ಕರ್ನಾಟಕಕ್ಕೆ ಬರುತ್ತೇನೆ, ಬೆಂಗಳೂರು ಪೊಲೀಸರು ನನ್ನನ್ನು ಕಾಪಾಡುತ್ತಾರ? : ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್…

395
firstsuddi

ಬೆಂಗಳೂರು : ಸಾವಿರಾರು ಜನ ಹಣ ಹೂಡಿಕೆದಾರರಿಗೆ ವಂಚಿಸಿ ದುಬೈ ಸೇರಿದ್ದ ಐಎಂಎ ಜ್ಯುವೆಲ್ಲರ್ಸ್ ಸಂಸ್ಥಾಪಕ ಮನ್ಸೂರ್ ಖಾನ್ ಅವರು ಇಂದು ಮತ್ತೊಂದು ವೀಡಿಯೋ ಬಿಡುಗಡೆ ಮಾಡಿದ್ದು, ನನಗೆ ಭಾರತದ ಸಂವಿಧಾನದ ಮೇಲೆ ನಂಬಿಕೆ ಇದೆ. ನನ್ನನ್ನು ನಂಬಿರುವ ಜನರಿಗೆ ನಾನು ಮೋಸ ಮಾಡುವುದಿಲ್ಲ. ನನ್ನ ಎಲ್ಲಾ ಆಸ್ತಿಗಳನ್ನು ಹಣವಾಗಿ ಪರಿವರ್ತಿಸಿ ಎಲ್ಲರ ಹಣವನ್ನು ವಾಪಸ್ ನೀಡಲು ಮುಂದಿನ 24 ಗಂಟೆಯಲ್ಲಿ ನಾನು ಕರ್ನಾಟಕಕ್ಕೆ ಬರುತ್ತೇನೆ. ಹಣವನ್ನು ವಾಪಸ್ ಮಾಡುತ್ತೇನೆ. ಬೆಂಗಳೂರು ಪೊಲೀಸರು ನನ್ನನ್ನು ಕಾಪಾಡುತ್ತಾರ? ಎಂದು ವೀಡಿಯೋದಲ್ಲಿ ಪೊಲೀಸರನ್ನು ಪ್ರಶ್ನಿಸಿದ್ದು, ನಾನು ಈ ಹಿಂದೆ ಮಾಡಿದ್ದ ವೀಡಿಯೋದಲ್ಲಿ ಭಾರತಕ್ಕೆ ಬರುವುದಾಗಿ ತಿಳಿಸಿದ್ದೆ, ಆದರೆ ನನ್ನ ಅನಾರೋಗ್ಯದ ಸಮಸ್ಯೆಯಿಂದ ಭಾರತಕ್ಕೆ ಬರಲು ಆಗಲಿಲ್ಲ. ಈಗಾ ನಾನು ಭಾರತಕ್ಕೆ ಬರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.