ನಾನು ನನ್ನ ಸ್ವಾಭಿಮಾನಕ್ಕೆ ದಕ್ಕೆಯಾಗಿದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬಿಟ್ಟಿದ್ದೇನೆ : ಉಮೇಶ್ ಜಾಧವ್…

185
firstsuddi

ಕಲಬುರಗಿ : ಉಮೇಶ್ ಜಾಧವ್ ಅವರು ನೀತಿಗೆಟ್ಟವರು ಎಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸುಭಾಷ್ ರಾಠೋಡ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಉಮೇಶ್ ಜಾಧವ್ ಅವರು ಪ್ರತಿಕ್ರಯಿಸಿದ್ದು, ಸುಭಾಷ್ ರಾಠೋಡ್ ಅವರು ನೀತಿಗೆಟ್ಟವರು, ನಾನಲ್ಲ. ನಾನು ನನ್ನ ಸ್ವಾಭಿಮಾನಕ್ಕೆ ದಕ್ಕೆಯಾಗಿದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬಿಟ್ಟಿದ್ದೇನೆ. ಸುಭಾಷ್ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ಈಗಾ ಅವರ ಕಾಲಿಗೆ ಬಿದ್ದು ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ನಾನು ತಿನ್ನುವ ತಟ್ಟೆಗೆ ಬೆಲೆ ಕೊಡುತ್ತೇನೆ. ಆದರೆ ಸುಭಾಷ್ ಅವರು ತಿನ್ನುವ ತಟ್ಟೆಯನ್ನೇ ಒದ್ದಿದ್ದಾರೆ ಎಂದು ಸುಭಾಷ್ ರಾಠೋಡ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುವುದರ ಕುರಿತು ಮಾತನಾಡಿದ ಉಮೇಶ್ ಜಾಧವ್ ಅವರು ಸಿದ್ದರಾಮಯ್ಯ ಅವರು ನನ್ನ ರಾಜಕೀಯ ಗುರುಗಳಾಗಿದ್ದಾರೆ. ಅವರ ಕೆಲಸ ಅವರು ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಾರ ವಿರುದ್ಧ ಬೇಕಾದರೂ ಪ್ರಚಾರ ಮಾಡಬಹುದು. ಚಿಂಚೋಳಿಯಲ್ಲಿ ಜಾಧವ್ ಅವರ ಹವಾ ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.