ಮಂಡ್ಯ : ನಾನು ರಾಜಕೀಯದಲ್ಲಿ ಇರುವವರೆಗೆ ನನ್ನ ಮಗ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ಕುಟುಂಬ ರಾಜಕೀಯ ಮಾಡಿಲ್ಲ. ಚಾಮುಂಡಿ ತಾಯಿ ಮೇಲೆ ಆಣೆ ನಾನು ಅಭಿಷೇಕ್ ಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ ಎಂದು ಹೇಳಿದರು.
ಎರಡು ಪಕ್ಷಗಳಿಂದ ಅಭಿಷೇಕ್ ಗೆ ಮಂಡ್ಯ, ಮದ್ದೂರಿನಿಂದ ಆಹ್ವಾನ ಬಂದಿತ್ತು. ಅಭಿಷೇಕ್, ಈಗ ನಮ್ಮ ತಾಯಿ ಕೆಲಸ ಮಾಡ್ತಾ ಇದ್ದಾರೆ. ಅವರು ರಾಜಕೀಯ ಮಾಡಲಿ. ನಾನು ರಾಜಕೀಯಕ್ಕೆ ಬರಬೇಕು ಎಂದ್ರೆ ಒಂದು ಪಕ್ಷ ಸೇರಿ ಕಾರ್ಯಕರ್ತನಾಗಿ ದುಡಿದು ಚುನಾವಣೆಗೆ ನಿಲ್ಲುತ್ತೇನೆ ಎಂದು ಅಭಿ ಹೇಳಿದ್ದಾನೆ ಎಂದು ತಿಳಿಸಿದರು.










