ನಾನು 5ಜಿ ವಿರೋಧಿಯಲ್ಲ, ಆದರೆ ಇದು ಸುರಕ್ಷಿತವೇ ಎಂಬುದನ್ನು ತಿಳಿಯಬೇಕು : ನಟಿ ಜೂಹಿ ಚಾವ್ಲಾ.

88
firstsuddi

ಮುಂಬೈ : 5ಜಿ ತಂತ್ರಜ್ಞಾನ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಆರೋಪಿಸಿ ದೆಹಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಜೂಹಿ ಚಾವ್ಲಾ ಅವರು 5ಜಿ ತಂತ್ರಜ್ಞಾನ ಜಾರಿಗೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಆದರೆ ಜೂಹಿ ಚಾವ್ಲಾ ಅವರ ಈ ಅರ್ಜಿಯನ್ನು ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದು ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ 20 ಲಕ್ಷ ರೂ ದಂಡ ವಿಧಿಸಿತ್ತು. ಅಲ್ಲದೇ ಈ ವಿಚಾರಣೆಯ ಲಿಂಕ್ ನ್ನು ಜೂಹಿ ಚಾವ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಮೂರು ಬಾರಿ ವಿಚಾರಣೆಗೆ ಅಡ್ಡಿಯಾಗಿತ್ತು. ಅದಲ್ಲದೇ ಅಭಿಮಾಯೋರ್ವ ನಟಿಯ ಹಾಡು ಹಾಡಿ ವಿಚಾರಣೆಗೆ ಅಡ್ಡಿ ಪಡಿಸಿದ್ದು, ಆತನ ವಿರುದ್ಧವು ಕಾನೂನು ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿತ್ತು.

ಇದರಿಂದಾಗಿ ನಟಿ ತೀವ್ರ ಮುಜುಕರಕ್ಕೊಳಗಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ, 5- ಜಿ ವಿರುದ್ಧ ಅರ್ಜಿ ಏಕೆ ಸಲ್ಲಿಸಿದ್ದೆ ಎಂಬ ಬಗ್ಗೆ ವಿವರಿಸಿರುವ ನಟಿ ಜೂಹಿ ಚಾವ್ಲಾ ಅವರು, ನಾನು 5ಜಿ ತಂತ್ರಜ್ಞಾನದ ವಿರೋಧಿಯಲ್ಲ. ಆದರೆ ಇದರಿಂದ ಆಗಬಹುದಾದ ಸಮಸ್ಯೆಗಳನ್ನು ತಡೆಯಬೇಕು. ಮತ್ತು ಪ್ರತೀಯೊಬ್ಬರಿಗೂ ಇದು ಸುರಕ್ಷಿತ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.