ಬೆಂಗಳೂರು : “ಪಾಪ ಶ್ರೀ ರಾಮುಲು ಬಗ್ಗೆ ಏನು ಮಾತನಾಡುವುದು. ಸ್ವಾರ್ಥ ಬುದ್ದಿ ತೋರಿಸುವವರೆಲ್ಲಾ ಒಂದೆಡೆ ಸೇರಿಕೊಂಡಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಬಿ. ಶ್ರೀ ರಾಮುಲು ತಮ್ಮ ಟ್ವಿಟರ್ ಮೂಲಕ ಪ್ರತಿಕ್ರಯಿಸಿದ್ದು, “ನಾನೇನು ಸ್ವಾರ್ಥದ ಕೆಲಸ ಮಾಡಿದ್ದೇನೆ ಹೇಳಿ ಸಿದ್ದರಾಮಯ್ಯನವರೇ. ಉಪಮುಖ್ಯಮಂತ್ರಿ ಮಾಡಿ ಹಣಕಾಸು ಖಾತೆಯಂತಹ ಮಹತ್ವದ ಖಾತೆಗಳನ್ನು ನೀಡಿದ್ದರೂ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಸುಳ್ಳು ಹೇಳಿಕೊಂಡು ನಿಮ್ಮನ್ನು ಬೆಳೆಸಿ ನಾಯಕನನ್ನಾಗಿ ರೂಪಿಸಿದ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿ ಆ ಪಕ್ಷದ ಹಿರಿಯ ನಾಯಕರಿಗೆಲ್ಲಾ ಅನ್ಯಾಯ ಮಾಡಿ ಮುಖ್ಯಮಂತ್ರಿಯಾಗಿದ್ದು ನಿಮ್ಮ ಸ್ವಾರ್ಥವಲ್ಲವೇ ಸಿದ್ದರಾಮಯ್ಯನವರೇ, ನನಗೆ ಮಾನ, ಮರ್ಯಾದೆ ಇದೆಯಾ ಎಂದು ಕೇಳಿದ್ದೀರಿಲ್ಲಾ ಸಿದ್ದರಾಮಯ್ಯ. ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ ನೀವು ನಂತರ ಅವರ ಮನೆಬಾಗಿಲಿಗೆ ಹೋಗಿ ಕರೆತಂದು ಮುಖ್ಯಮಂತ್ರಿ ಮಾಡಿ ನಂತರ ಶಡ್ಯಂತ್ರ ಮಾಡಿ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿದ ನಿಮಗೆ ಮಾನ, ಮರ್ಯಾದೆ ಎಂದರೆ ಏನು ಎಂಬುದು ಗೊತ್ತಿದೆಯೇ?.ಎಂದು ಪ್ರಶ್ನಿಸಿದ್ದು, ಬಳಿಕ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸವಾಲು ನೀಡಿದ್ದು, ಮಾನ್ಯ ಸಿದ್ದರಾಮಯ್ಯನವರೇ, ನಿಮಗೊಂದು ಸವಾಲು. ಬಾದಾಮಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನೀವು ಗೆದ್ದಿರಬಹುದು. ಮೀಸಲಾತಿ ಇಲ್ಲದ ಕ್ಷೇತ್ರವಾದರೂ ಸರಿಯೇ ನನ್ನ ವಿರುದ್ಧ ಗೆದ್ದು ತೋರಿಸಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಾನೂ ರಾಜೀನಾಮೆ ಕೊಟ್ಟು ಬರುತ್ತೇನೆ. ಜನ ಯಾರನ್ನು ಗೆಲ್ಲಿಸುತ್ತಾರೋ ನೋಡಿಯೇ ಬಿಡೋಣ ಎಂದು ಸವಾಲೆಸೆದಿದ್ದಾರೆ.










