ಬೆಂಗಳೂರು : ನಾಳೆಯಿಂದಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಶೈಕ್ಷಣಿಕ ವರ್ಷದ ಆರಂಭದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
ನಾಳೆಯಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆರಂಭಿಸಲು ಸೂಚಿಸಲಾಗಿದ್ದು, ಜುಲೈ 1 ರಿಂದ ಶೈಕ್ಷಣಿಕ ವರ್ಷ ಶಾಲಾ ತರಗತಿಗಳು ಆರಂಭವಾಗಲಿವೆ. ನಾಳೆಯಿಂದ ಮಕ್ಕಳ ಶಾಲಾ ದಾಖಲಾತಿ ಪ್ರಾರಂಭಿಸಿ ಆಗಸ್ಟ್ 31ರ ಒಳಗೆ ಮುಕ್ತಾಯಗೊಳಿಸಬೇಕು. ಈಗಾಗಲೇ ಒಂದು ಶೈಕ್ಷಣಿಕ ವರ್ಷ ತಡವಾಗಿದೆ. ಶಿಕ್ಷಕರು ಕೂಡ ಅನ್ಯ ಕಾರಣ ನೀಡದೆ ಕಾರ್ಯ ನಿರ್ವಹಿಸಬೇಕು. ಲಾಕ್ ಡೌನ್ ಜಾರಿಯಲ್ಲಿರುವ ಜಿಲ್ಲೆಯವರು ಪಾಸ್ ನೊಂದಿಗೆ ಶಾಲೆಗೆ ಬರಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದೂಡವ ಪ್ರಶ್ನೆಯೇ ಇಲ್ಲ. ಕೋವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯ ಆಗದಿದ್ದರೆ, ಪರ್ಯಾಯವಾಗಿ ಆನ್ ಲೈನ್, ಅಂತರ್ಜಾಲ, ದೂರದರ್ಶನ, ಕಲಿಕೆಯನ್ನು ನೀಡುವಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.










