ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ಟ್ವಿಟರ್ ಮುಖ್ಯಸ್ಥ…

85
firstsuddi

ನವದೆಹಲಿ : ಟ್ವಿಟರ್ ಇಂಡಿಯಾದ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್ ಗೆ  ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಉತ್ತರಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿಸಿದ ಪ್ರಕರಣ ಸಂಬಂಧ, ನಿನ್ನೆ ಗಾಜಿಯಾಬಾದ್ ಪೊಲೀಸರು ಮನೀಶ್ ಮಹೇಶ್ವರಿಯನ್ನು ವಿಚಾರಣೆಗೆ ಕರೆದಿದ್ದರು, ಆದರೆ ತಮ್ಮನ್ನು ವಿಚಾರಣೆಗೆ ಒಳಪಡಿಸುವ ಮುನ್ನವೇ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ.

ಜೂನ್ 21 ರಂದು ವಿಡಿಯೋ ಕಾಲ್ ಮೂಲಕ ವಿಚಾರಣೆ ಎದುರಿಸುವುದಾಗಿ ಮನೀಶ್ ಮಹೇಶ್ವರಿ ಹೇಳಿದ್ದರು. ಆದರೆ ಪೊಲೀಸರು ಅವರನ್ನು ಠಾಣೆಗೆ ಬರುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಮುಸ್ಲಿಂ ವ್ಯಕ್ತಿಗೆ ಜೈ ಶ್ರೀರಾಮ್ ಹಾಗೂ ವಂದೇ ಮಾತರಂ ಹೇಳುವಂತೆ ಒತ್ತಾಯಿಸಿ ಕಿಡಿಗೇಡಿಗಳು ಥಳಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ದಾರಿ ತಪ್ಪಿಸುವ ಪೋಸ್ಟ್ ಗಳನ್ನು ಹಾಕಿದ್ದಕ್ಕಾಗಿ ಕಳೆದ ವಾರ ಟ್ವಿಟರ್ ಇಂಡಿಯಾ, ಕಾಂಗ್ರೆಸ್ ನಾಯಕರು, ಹಲವು ಪತ್ರಕರ್ತರ ವಿರುದ್ಧ ದೂರು ದಾಖಲಿಸಲಾಗಿತ್ತು.