ನವದೆಹಲಿ : ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಆರೋಪಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದ್ದು, ಡಿ.16ರಂದು ಆರೋಪಿಗಳನ್ನು ಗಲ್ಲಿಗೇರಿಸುವುದು ಬಹುತೇಕ ಖಚಿತವಾಗಿದೆ. ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸುವ ವ್ಯಕ್ತಿ ಇಲ್ಲದ ಕಾರಣ ತಿಹಾರ್ ಜೈಲು ಅಧಿಕಾರಿಗಳು ಆರೋಪಿಗಳನ್ನು ಗಲ್ಲಿಗೇರಿಸಲು ಸಿಬ್ಬಂದಿ ಬೇಕು ಎಂದು ದೇಶದ ವಿವಿಧ ಜೈಲುಗಳ ಮೊರೆ ಹೋಗಿದ್ದರು. ಈ ವೇಳೆ ಮೀರತ್ ಜೈಲಿನಲ್ಲಿ ಇಬ್ಬರು ಹ್ಯಾಂಗ್‍ಮ್ಯಾನ್ ಇರುವುದಾಗಿ ತಿಳಿದು ಬಂದಿದ್ದು, ಮೀರತ್ ಜೈಲಿಗೆ ತಿಹಾರ್ ಜೈಲು ಅಧಿಕಾರಿಗಳು ಪತ್ರದ ಮೂಲಕ ಓರ್ವ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಮೀರತ್ ಜೈಲಿನ ಹ್ಯಾಂಗ್‍ಮ್ಯಾನ್ ಪವನ್ ಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಿದ್ದು, ಸದ್ಯದಲ್ಲೇ ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಲಿದ್ದಾರೆ.










